ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

ದಾವಣಗೆರೆ: ಜಿಲ್ಲೆಯ ಆನಗೋಡು ಗ್ರಾಮದ ಬಳಿ ನಕಲಿ ನಾಗಮಣಿಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

ಕರಿಬಸಪ್ಪ, ಕುಮಾರ್ ಹಾಗೂ ಸುರೇಶ್ ಬಂಧಿತ ಆರೋಪಿಗಳು. ಕುಮಾರ್ ಹಾಗೂ ಸುರೇಶ್ ಎಂಬವರು ಆನಗೋಡು ಗ್ರಾಮದ ಕರಿಬಸಪ್ಪ ಎನ್ನುವರಿಗೆ ನಕಲಿ ನಾಗಮಣಿಯನ್ನು ತೋರಿಸಿ, ಇದು ನೂರಾರು ಕೋಟಿ ರೂ. ಬೆಲೆಬಾಳುತ್ತದೆ ಎಂದು ನಂಬಿಸಿ ವ್ಯಾಪಾರವನ್ನು ಕುದುರಿಸಿದ್ದರು. ಅಲ್ಲದೇ 10 ಲಕ್ಷಕ್ಕೆ ನಕಲಿ ನಾಗಮಣಿಯ ಡೀಲ್ ಮುಗಿಸಿಕೊಂಡಿದ್ದ ಇಬ್ಬರೂ, ಮುಂಗಡವಾಗಿ 50 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರು.

ಇದರ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ಕಿರಣ್ ಕುಮಾರ್ ಹಾಗೂ ಡಿಸಿಬಿ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿದ್ದ ನಕಲಿ ನಾಗಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದ್ದು, ಇದೀಗ ನಕಲಿ ನಾಗಮಣಿ ಮಾರಾಟದ ಜಾಲ ತಲೆ ಎತ್ತಿದೆ. ಹೀಗಾಗಿ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *