ವಾಹನ ಅಡ್ಡಗಟ್ಟಿ ವಸೂಲಿ ಮಾಡ್ತಿದ್ದವರ ಬಂಧನ

– ಪೊಲೀಸರಿಗೆ ಎಸ್‍ಪಿ ಅಭಿನಂದನೆ

ಚಿತ್ರದುರ್ಗ: ವಾಹನಗಳನ್ನು ಅಡ್ಡಗಟ್ಟಿ ವಸೂಲಿ ಮಾಡುತ್ತಿರುವ ತಂಡವೊಂದನ್ನು ಬಂಧಿಸುವಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೋಲಿಸರು ಯಶಸ್ವಿಯಾಗಿದ್ದಾರೆ.

ದ್ಯಾಮಪ್ಪ ( 25), ಶಂಕರ (19), ಬಸವರಾಜ (26), ಯಮನೂರು (22) ಬಂಧತರು. ಈ ತಂಡದಲ್ಲಿ ಮಾರಪ್ಪ (24) ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸದ್ಯ ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತರೆಲ್ಲರೂ ಬಳ್ಳಾರಿ, ಗದಗ, ರಾಯಚೂರು ಮೂಲದವರಾಗಿದ್ದು ಪಾತ್ರೆ, ಕೂದಲು ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗಿದೆ.

ತಂಡವೊಂದು ಹೀಗೆ ವಸೂಲಿ ಮಾಡುತ್ತಿರುವುದರ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪಿಎಸ್‍ಐ ಉಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪರಿಣಾಮ ತಂಡವೊಂದರ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು, ಮಚ್ಚು, ದೊಣ್ಣೆ, ಕಲ್ಲುಗಳು, ಡ್ರಾಗರ್ ಹಾಗೂ ಕರದಪುಡಿ ವಶ ಪಡಿಸಿಕೊಳ್ಳಲಾಗಿದೆ.

ಹಿರಿಯೂರು ಪೋಲಿಸರ ಕಾರ್ಯಾಚರಣೆಗೆ ಚಿತ್ರದುರ್ಗ ಎಸ್ಪಿ ಡಾ. ಕೆ. ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *