ಹಗಲು ಬೈಕಿನಲ್ಲಿ ಓಡಾಡಿ ಸ್ಕೆಚ್, ರಾತ್ರಿ ಕಳ್ಳತನ

– ಇಬ್ಬರು ಟಗರು ಕಳ್ಳರ ಬಂಧನ

ಹಾವೇರಿ: ಟಗರು ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಹಾವೇರಿ ಜಿಲ್ಲೆ ಬ್ಯಾಡಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಗರು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಫಕ್ಕೀರಪ್ಪ ಗೋಟನವರ(34) ಮತ್ತು ಮಂಜುನಾಥ ಗೋಟನವರ(28) ಎಂದು ಗುರುತಿಸಲಾಗಿದೆ. ಬಂಧಿತರಿಂದ ಐವತ್ತು ಸಾವಿರಕ್ಕೂ ಅಧಿಕ ಮೌಲ್ಯದ ಐದು ಟಗರುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಹಗಲು ಹೊತ್ತಿನಲ್ಲಿ ಬೈಕಿನಲ್ಲಿ ಓಡಾಡಿ ಗ್ರಾಮದಲ್ಲಿ ಟಗರುಗಳಿಗೆ ಸ್ಕೆಚ್ ಹಾಕ್ತಿದ್ದರು. ನಂತರ ರಾತ್ರಿ ವೇಳೆ ಅವುಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಇದೀಗ ಕದ್ದ ಟಗರುಗಳನ್ನ ಮಾರಾಟಕ್ಕೆ ಸಾಗಿಸೋ ವೇಳೆ ಪೊಲೀಸರ ಬಲೆಗೆ ಬಿದ್ದು ಜೈಲುಪಾಲಾಗಿದ್ದಾರೆ. ಬ್ಯಾಡಗಿ ತಾಲೂಕಿನ ಕಲ್ಲೆದೇವರು ಮತ್ತು ಕೆಂಗೊಂಡ ಗ್ರಾಮಗಳಲ್ಲಿ ಟಗರು ಕಳ್ಳತನ ಮಾಡಿದ್ದರು ಎನ್ನಲಾಗಿದೆ.

ಬ್ಯಾಡಗಿ ಪಿಎಸ್‍ಐ ಮಹಾಂತೇಶ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *