ಪಾಕ್‌ ಆಕ್ರಮಿತ ಕಾಶ್ಮೀರ 2025 ರೊಳಗೆ ಭಾರತದೊಂದಿಗೆ ವಿಲೀನಗೊಳ್ಳುತ್ತೆ: ಜ್ಯೋತಿಷಿ ಭವಿಷ್ಯ

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರ (POK) 2025 ರೊಳಗೆ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಪ್ರಸಿದ್ಧ ವೈದಿಕ ಜ್ಯೋತಿಷಿ ರುದ್ರ ಕರಣ್‌ ಪ್ರತಾಪ್‌ (Rudra Karan Partaap) ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಧಾನಿ ಮೋದಿಯವರು ಸದ್ಯಕ್ಕೆ ಮಂಗಳ ಮಹಾದಶಾ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಭೂಮಿಗೆ ಸಂಬಂಧಿಸಿದ ವಿಷಯಗಳು ಗಮನಾರ್ಹವಾದ ಗಮನವನ್ನು ನೀಡುತ್ತವೆ ಎಂದು ಊಹಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) 2025 ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಒಳಗೆ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ

ಪ್ರಧಾನಿ ಮೋದಿ ಅವರು 2024 ರಲ್ಲಿ ಮತ್ತೊಂದು ಅವಧಿಗೆ ಅಧಿಕಾರ ನಡೆಸುವುದು ಸ್ಪಷ್ಟ ಎಂದು ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರು 2024 ಮಾರ್ಚ್‌ನಿಂದ ಗಮನಾರ್ಹ ಹಿನ್ನಡೆ ಎದುರಿಸಬಹುದು ಎಂದು ರುದ್ರ ಅವರು 2022 ರ ಮಾರ್ಚ್‌ ತಿಂಗಳಲ್ಲಿ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಈ ಭವಿಷ್ಯವು ನಿಖರವಾದಂತೆ ತೋರಿದೆ. ಏಕೆಂದರೆ, ಜಾರಿ ನಿರ್ದೇಶನಾಲಯವು ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಸಿದೆ. ಇದನ್ನೂ ಓದಿ: ಕಂಗನಾ ರಣಾವತ್ ಗೋಮಾಂಸ ಇಷ್ಟ ಎಂದಿದ್ದರು: ಕೈ ನಾಯಕ ವಿವಾದಾತ್ಮಕ ಹೇಳಿಕೆ

2023 ರ ತೆಲಂಗಾಣ ಚುನಾವಣೆಯಲ್ಲಿ ಕೆ. ಚಂದ್ರಶೇಖರ್ ರಾವ್ ಅವರ ಹಾಲಿ ಸರ್ಕಾರ ಮರು ಆಯ್ಕೆಯಾಗಲಿದ್ದು, ಅಧಿಕಾರಾವಧಿಯನ್ನು ಮುಂದುವರಿಸಲಿದೆ ಎಂದು ರುದ್ರ ಭವಿಷ್ಯ ನುಡಿದಿದ್ದರು. ನಂತರ ಟ್ವೀಟ್‌ ಅನ್ನು ಡಿಲೀಟ್‌ ಮಾಡಲಾಗಿತ್ತು. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಕಾಂಗ್ರೆಸ್‌ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಿತು.