ಪ್ರಧಾನಿ ಮೋದಿ ಡೆಂಗ್ಯೂ ಸೊಳ್ಳೆ ಇದ್ದಂತೆ: ಕಾಂಗ್ರೆಸ್ ಶಾಸಕಿ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಡೆಂಗ್ಯೂ ಸೊಳ್ಳೆ ಇದ್ದಂತೆ ಎಂದು ಮಾಜಿ ಕೇಂದ್ರ ಗೃಹಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಸಿಂಧೆ ಅವರ ಪುತ್ರಿ ಪ್ರಣಿತಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರದ ಪ್ರಣಿತಿ ಸೊಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ. ಸೊಲ್ಲಾಪುರ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಶಾಸಕಿ, ದೇಶದಲ್ಲಿ ಹೊಸ ರೀತಿಯ ಮೋದಿ ಬಾಬಾ ಡೆಂಗ್ಯೂ ಸೊಳ್ಳೆ ಬಂದಿದೆ. ಅದು ಎಲ್ಲರನ್ನೂ ಕಾಯಿಲೆಗೆ ಗುರಿ ಮಾಡುತ್ತಿದೆ ಎಂದರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು, ಕ್ಷೇತ್ರದಲ್ಲಿ ಶಾಸಕಿ ಪ್ರಣಿತಿ ಅವರು ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ಬಿಜೆಪಿ ಸಂಸದ ಶರದ್ ಬನ್ಸೋಡ್ ಅವರು ಒಬ್ಬ ಕುಡುಕ ಎಂದು ಪ್ರಣಿತಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ವಾಗ್ದಮ್ ಪಕ್ಷೇತರ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೆವಾನಿ ಪ್ರಧಾನಿ ಮೋದಿ ಒಬ್ಬ ನಮಕ್ ಹರಾಮ್ ಎಂದು ಟೀಕೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *