ಕೊಪ್ಪಳ: ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಮಾನಿಯೋರ್ವ ತನ್ನ ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ.
ಕೊಪ್ಪಳ ತಾಲೂಕಿನ ಬೇಳೂರ್ ನಿವಾಸಿಯಾದ ಕೃಷ್ಣಾರೆಡ್ಡಿ ತನ್ನ ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿ ಮೋದಿ ಅಭಿಮಾನ ಮೆರೆದಿದ್ದಾರೆ. 2018 ರ ನವೆಂಬರ್ 09ರಂದು ಕೃಷ್ಣಾರೆಡ್ಡಿ ದಂಪತಿಗೆ ಗಂಡು ಮಗು ಜನಿಸಿದೆ. ಹುಟ್ಟಿದ 25 ದಿನಕ್ಕೆ ಶಾಸ್ತ್ರೋಕ್ತವಾಗಿ ಕೃಷ್ಣಾರೆಡ್ಡಿ ತನ್ನ ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದಾರೆ.

ಬೇಳೂರಿನ ಯುವಕರೆಲ್ಲರೂ ಸೇರಿಕೊಂಡು ‘ಬಿಜೆಪಿ ಯುವ ಸಂಘಟನೆ’ ಯನ್ನು ಮಾಡಿದ್ದೇವೆ. ಎಲ್ಲರೂ ಒಗ್ಗೂಡಿ ಬಿಜೆಪಿಯ ಎಲ್ಲ ಕಾರ್ಯಕ್ರಮವನ್ನು ಮಾಡುತ್ತೇವೆ. ನಾವೆಲ್ಲರೂ ಅವರ ಅಭಿಮಾನಿಗಳಾಗಿದ್ದು, ವಾಟ್ಸಪ್ ಗ್ರೂಪ್ ಮಾಡಿ ಅದರಲ್ಲಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಚರ್ಚೆ ಮಾಡುತ್ತೇವೆ. ನರೇಂದ್ರ ಮೋದಿ ಅವರು ದೇಶವನ್ನು ಒಂದು ಮಾದರಿ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ. ಹೀಗಾಗಿ ನಾನು ನನ್ನ ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದೇನೆ. ಈ ಮೂಲಕ ನನ್ನ ಮಗನೂ ಈ ದೇಶಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಲಿ ಎಂದು ಆಶಿಸುತ್ತೇನೆ ಎಂದು ತಂದೆ ಕೃಷ್ಣಾರೆಡ್ಡಿ ಹೇಳಿದ್ದಾರೆ.

ಮೂಲತಃ ಬಿಜೆಪಿ ಕಾರ್ಯಕರ್ತನಾದ ಕೃಷ್ಣಾರೆಡ್ಡಿ ಮೋದಿ ಮೇಲಿನ ಅಭಿಮಾನದಿಂದ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದು, ಗ್ರಾಮದಲ್ಲಿ ಪುಟ್ಟ ಬಾಲಕನನ್ನ ನರೇಂದ್ರ ಮೋದಿ ಎಂದೇ ಕರೆಯುತ್ತಾರಂತೆ. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಮೋದಿ ಪ್ರಧಾನಿಯಾದರೆ ಗ್ರಾಮದವರೆಲ್ಲ ಸೇರಿ ಕಾರ್ಯಕ್ರಮ ಮಾಡಿ ಮೋದಿ ಎಂದು ನಾಮಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply