ಮೋದಿ ಆಟೋಗ್ರಾಫ್ ನಿಂದ ಹುಡುಗಿಯ ಹಿಂದೆ ಕ್ಯೂ ನಿಂತ ಯುವಕರು!

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿಯೊಬ್ಬಳು ಇದೀಗ ಪಶ್ಚಿಮ ಬಂಗಾಳದ ಹಳ್ಳಿಯಲ್ಲೇ ಪ್ರಸಿದ್ಧಿ ಪಡೆದಿದ್ದಾಳೆ. ಅಲ್ಲದೇ ಆಕೆಗೆ ಮದುವೆ ಸಂಬಂಧಗಳು ಕೂಡ ಒಂದರ ಮೇಲೊಂದರಂತೆ ಬರುತ್ತಿವೆ.

ರೀಟಾ ಮುಡಿ, ಪ್ರಧಾನಿ ಬಳಿಯಿಂದ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿ. ಈಕೆ ಬಂಕುರಾದ ಕ್ರಿಶ್ಚಿಯನ್ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಕೋಲ್ಕತ್ತಾದಿಂದ 230 ಕಿ.ಮೀ ದೂರದಲ್ಲಿರೋ ಹಳ್ಳಿ ನಿವಾಸಿಯಾಗಿರೋ ರೀಟಾ ಯಾವತ್ತು ತಾನು ಪ್ರಧಾನಿ ಕೈಯಿಂದ ಆಟೋಗ್ರಾಫ್ ಪಡೆದುಕೊಂಡು ಇಷ್ಟು ದೊಡ್ಡ ವ್ಯಕ್ತಿಯಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದ್ರೆ ಇದೀಗ ಈಕೆ ಹಳ್ಳಿಯಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದು, ಪ್ರತೀ ನಿತ್ಯ ಅನೇಕರು ಬಂದು ಭೇಟಿಯಾಗುತ್ತಿದ್ದಾರೆ. ಅಲ್ಲದೇ ಘಟನೆಯ ಬಳಿಕ ಎರಡು ಮದುವೆ ಪ್ರಪೋಸಲ್ಸ್ ಗಳು ಕೂಡ ಬಂದಿದೆ.

ರಿಟಾ ಸೆಲೆಬ್ರಿಟಿಯಾಗಿದ್ದು ಹೇಗೆ?:
ಜುಲೈ 16ರಂದು ಮಿಡ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವಿತ್ತು. ಮೋದಿಯವರ ಭಾಷಣ ಕೇಳಲು ತಮ್ಮ ತಾಯಿಯೊಂದಿಗೆ ರಿಟಾ ತೆರಳಿದ್ದಳು. ದುರಾದೃಷ್ಟವೆಂಬಂತೆ ಕಾರ್ಯಕ್ರಮದ ವೇಳೆ ಟೆಂಟ್ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಗಾಯಗೊಂಡವರಲ್ಲಿ ರಿಟಾ ಕೂಡ ಒಬ್ಬಳಾಗಿದ್ದು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೀಗಾಗಿ ತಮ್ಮ ಭಾಷಣದ ಬಳಿಕ ಮೋದಿಯವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಿಟಾ ಆಟೋಗ್ರಾಫ್ ಕೇಳೋದಿಕ್ಕೆ ಹಿಂಜರಿದಿದ್ದಾಳೆ. ಆದ್ರೂ ಗಟ್ಟಿ ಮನಸ್ಸು ಮಾಡಿ ರಿಟಾ ಮೋದಿ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾಳೆ. ಹೀಗಾಗಿ ಪ್ರಧಾನಿಯವರು `ರಿಟಾ ಮುಡಿ ತುಮ್ ಸುಖಿ ರಹೋ'(ರಿಟಾ ಮುಡಿಯವರೇ ಸುಖವಾಗಿರು) ಅಂತ ಒಂದು ಚೀಟಿಯಲ್ಲಿ ಬರೆದು ಮಲಗಿದ್ದ ರಿಟಾ ಬಳಿ ಇಟ್ಟಿದ್ದರು. ಈ ಘಟನೆಯ ಮರುದಿನದಿಂದಲೇ ನಮ್ಮ ಮನೆಗೆ ಅತಿಥಿಗಳು ಬರಲು ಆರಂಭಿಸಿದ್ದಾರೆ. ಅಲ್ಲದೇ ಬಂದವರೆಲ್ಲರೂ ಆಟೋಗ್ರಾಫ್ ತೋರಿಸುವಂತೆ ಹೇಳುತ್ತಿದ್ದಾರೆ ಅಂತ ರಿಟಾ ತಿಳಿಸಿದ್ದಾಳೆ.

ಅತಿಥಿಗಳು ಮಾತ್ರವಲ್ಲದೇ ಮಗಳಿಗೆ ಎರಡು ಮದುವೆ ಸಂಬಂಧಗಳು ಕೂಡ ಬಂದಿವೆ. ಅದರಲ್ಲಿ ಒಂದು ಜಾರ್ಖಂಡ್ ಮೂಲದಾಗಿದ್ದು, ಆತ ಉದ್ಯಮಿಯಾಗಿದ್ದನು. ಈತ ವರದಕ್ಷಿಣೆಯಂತಹ ಯಾವುದೇ ಬೇಡಿಕೆಯನ್ನು ಇಟ್ಟಿರಲಿಲ್ಲ. ಇನ್ನೊಂದು ಬಂಕುರಾದವರೇ ಆಗಿದ್ದು, ಆ ಯುವಕ ಸ್ವಂತ ಜಮೀನು ಹೊಂದಿದ್ದನು. ಆದ್ರೆ ನಮ್ಮ ಮಗಳು ಓದಬೇಕೆಂಬ ಆಸೆಯಿಂದ ಅಷ್ಟೊಂದು ಅದರತ್ತ ಗಮನ ಹರಿಸಿಲ್ಲ ಅಂತ ರಿಟಾ ತಾಯಿ ಸಂಧ್ಯಾ ಹೇಳಿದ್ದಾರೆ.

ಘಟನೆಗೂ ಮೊದಲು ರಿಟಾರಿಗೆ ಮದುವೆ ಸಂಬಂಧ ಬಂದಿತ್ತು. ಆದ್ರೆ ಅಂದು ಆ ಯುವಕ 1 ಲಕ್ಷ ವರದಕ್ಷಿಣೆ ಕೇಳಿದ್ದನು. ಆದ್ರೆ ರಿಟಾ ತಂದೆ ಆ ಸಂಬಂಧವನ್ನು ನಿರಾಕರಿಸಿದ್ದಳು. ಒಟ್ಟಿನಲ್ಲಿ ಸದ್ಯ ರಿಟಾರಿಗೆ ಯಾವುದೇ ಬೇಡಿಕೆಯಿಲ್ಲದೇ ಒಳ್ಳೊಳ್ಳೆಯ ಮದುವೆ ಸಂಬಂಧಗಳು ಬರುತ್ತಿದ್ದು, ನನ್ನ ಮದುವೆ ವಿಚಾರ ತಂದೆ-ತಾಯಿಗೆ ಬಿಟ್ಟಿದ್ದೇನೆ. ನಾನಿನ್ನೂ ಓದಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.

Comments

Leave a Reply

Your email address will not be published. Required fields are marked *