ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು ಜಮಾತ್-ಉದ್-ದವ(ಜೆಯುಡಿ) ನಿಷೇಧಿತ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾನೆ.

ರಂಜಾನ್ ಪ್ರಯುಕ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪೂಂಚ್ ಜಿಲ್ಲೆಯ ರಾವಲ್ಕೋಟ್‍ನ ಸಾರ್ವಜನಿಕ ಸಮಾರಂಭದಲ್ಲಿ ಹಫಿಜ್ ಸಯೀದ್ ಈ ಹೇಳಿಕೆಯನ್ನು ನೀಡಿದ್ದಾನೆ.

ಸಂಘಟನೆಯ ಹಿರಿಯ ಮುಖಂಡನಾದ ಮೌಲಾನ ಬಶೀರ್ ಅಹ್ಮದ್ ಖಾಖಿ, ಇಸ್ಲಾಂನ ಬಾವುಟವನ್ನು ಶೀಘ್ರವೇ ಭಾರತ ಮತ್ತು ಅಮೆರಿಕಾ ದೇಶದಲ್ಲಿ ಹಾರಿಸಿತ್ತೇವೆ. ಭಾರತದ ಪ್ರಧಾನಿ ಮೋದಿಯವರನ್ನು ಕೊಂದು ಹಾಕಿ, ಭಾರತ ಮತ್ತು ಇಸ್ರೇಲ್ ವಿಭಜನೆಯಲ್ಲಿ ಹೆಚ್ಚು ಮಂದಿ ಹುತಾತ್ಮರಾಗುತ್ತೇವೆ ಎಂದು ಎಂದು ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದಾನೆ.

ರಂಜಾನ್ ತಿಂಗಳು ನಮಗೆ ಪವಿತ್ರ ದಿನವಾಗಿದ್ದು, ಈ ಸಮಯದಲ್ಲಿ ಜಿಹಾದ್(ಯುದ್ಧ) ನಡೆಸಿದರೆ ಗೆಲುವು ನಮ್ಮದೆ. ಒಂದು ವೇಳೆ ಜಿಹಾದ್‍ನಲ್ಲಿ ಹುತಾತ್ಮರಾದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ. ಸಂಘಟನೆಯು ಈಗಾಗಲೇ ಭಾರತ ಸೇನೆಯೊಂದಿಗೆ ಕಾಶ್ಮೀರ ವಿಭಜನೆಗೋಸ್ಕರ ಹೋರಾಟ ನಡೆಯುತ್ತಿದೆ. ಕಾಶ್ಮೀರ ಸ್ವಾತಂತ್ರ್ಯ ಮತ್ತು ಭಾರತದ ನಾಶಕ್ಕೆ ಮತ್ತು ಇಸ್ಲಾಂ ಧ್ವಜ ಹಾರಿಸಲು ಸಂಘಟನೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಜನರಲ್ಲಿ ಸಯೀದ್ ಮನವಿ ಮಾಡಿದ್ದಾನೆ.

ರಂಜಾನ್ ತಿಂಗಳಲ್ಲಿ ದವಸ-ಧಾನ್ಯ ಹಾಗೂ ಹಣ ನೀಡಬೇಕು. ಕಾಶ್ಮೀರದ ಸ್ವಾತಂತ್ರ್ಯಕ್ಕೆ ತಮ್ಮ ಮಕ್ಕಳನ್ನು ಸಂಘಟನೆಗೆ ಸೇರಿಸುವಂತೆ ಮಹಿಳೆಯರಿಗೆ ಕರೆ ನೀಡಿದ್ದಾನೆ. ಇದನ್ನೂ ಓದಿ : ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

Comments

Leave a Reply

Your email address will not be published. Required fields are marked *