ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ- ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi Birthday) ಅವರ 73 ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೇರಿದಂತೆ ಹಲವು ಗಣ್ಯರು ಮತ್ತು ರಾಜಕೀಯ ನಾಯಕರು ಪ್ರಧಾನಿಗೆ ಶುಭಾಶಯಗಳನ್ನು ಕೋರಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು  ಟ್ವೀಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ನಂತರ ಪ್ರಧಾನಿ ಮೋದಿಯವರು ತಮ್ಮ ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ ‘ಅಮೃತ್ ಕಾಲ’ದ ಸಮಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ ಎಂದು ಶುಭ ಹಾರೈಸಿದರು.

ಗೃಹ ಸಚಿವ ಅಮಿತ್ ಶಾ (AmitShah) ಅವರು ಟ್ವೀಟ್ ಮಾಡಿ, ನವ ಭಾರತದ ವಾಸ್ತುಶಿಲ್ಪಿ ಎಂದು ಮೋದಿಯನ್ನು ಶ್ಲಾಘಿಸಿದರು. ಅಲ್ಲದೇ ದೇಶದ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಭವ್ಯವಾದ ಮತ್ತು ಸ್ವಾವಲಂಬಿ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕಿದ್ದಾರೆ. ಪಕ್ಷ ಸಂಘಟನೆಯಾಗಲಿ ಅಥವಾ ಸರ್ಕಾರವೇ ಆಗಿರಲಿ, ರಾಷ್ಟ್ರದ ಹಿತಾಸಕ್ತಿ ಅತ್ಯುನ್ನತವಾದುದೆಂಬ ಸ್ಫೂರ್ತಿಯನ್ನು ನಾವು ಸದಾ ಮೋದಿಯವರಿಂದ ಪಡೆಯುತ್ತೇವೆ. ಇಂತಹ ಅದ್ವಿತೀಯ ನಾಯಕನ ಅಡಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಸೌಭಾಗ್ಯ ಎಂದಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda), ಪ್ರಧಾನಿಯವರು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರತಿಷ್ಠೆ, ಜನರ ಬಹು ಆಯಾಮದ ಅಭಿವೃದ್ಧಿ ಮತ್ತು ರಾಷ್ಟ್ರದ ಸಾರ್ವತ್ರಿಕ ಪ್ರಗತಿಗೆ ಸ್ಪಷ್ಟವಾದ ರೂಪವನ್ನು ನೀಡಿದ್ದಾರೆ. ನಮ್ಮ ಗುರಿ “ಅಂತ್ಯೋದಯ” (ಅತ್ಯಂತ ತುಳಿತಕ್ಕೊಳಗಾದವರ ಉನ್ನತಿ) ಪ್ರತಿ ಗ್ರಾಮ ಮತ್ತು ಸಮಾಜದ ಪ್ರತಿಯೊಂದು ವಿಭಾಗವನ್ನು ತಲುಪಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಹೊಂದುವ ಸಂಕಲ್ಪಕ್ಕಾಗಿ ಮಂತ್ರವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿಗೆ ಶುಭಾಶಯ ಕೋರಿದರು.

ಮೋದಿ ಅವರು ಭಾರತಕ್ಕೆ ಕೇವಲ ಹೊಸ ಗುರುತನ್ನು ನೀಡದೆ ವಿಶ್ವದಲ್ಲಿ ಅದರ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ. ಪ್ರಧಾನಿಯವರು ಭಾರತದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ, ಅವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದರು.

ಒಟ್ಟಿನಲ್ಲಿ ಹುಟ್ಟುಹಬ್ಬದ ದಿದಂದೇ ಪ್ರಧಾನಿಯವರು ದ್ವಾರಕಾದಲ್ಲಿ ಯಶೋಭೂಮಿ ಹೆಸರಿನ ಇಂಡಿಯಾ ಇಂಟನ್ರ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ (ಐಐಸಿಸಿ) ನ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ದ್ವಾರಕಾ ಸೆಕ್ಟರ್ 21 ರಿಂದ ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣಕ್ಕೆ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‍ಪ್ರೆಸ್ ಲೈನ್‍ನ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]