ಕನ್ನಡದ ‘ಕಮಲದ ಮೊಗದೋಳೆ..’ ಹಾಡನ್ನು ಹಂಚಿಕೊಂಡು ನವರಾತ್ರಿ ಶುಭಾಶಯ ತಿಳಿಸಿದ ಮೋದಿ

ನವದೆಹಲಿ: ಲಕ್ಷ್ಮಿಯನ್ನು ಆರಾಧಿಸುವ ‘ಕಮಲದ ಮೊಗದೋಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೋಳೆ..’ ಹಾಡು ಕನ್ನಡದ ಜನಪ್ರಿಯ ಭಕ್ತಿಗೀತೆ. ನವರಾತ್ರಿಯ (Navratri Festival) ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡನ್ನು ಹಂಚಿಕೊಂಡಿದ್ದಾರೆ.

1984ರಲ್ಲಿ ಬಿಡುಗಡೆಯಾದ ಹೊಸ ಇತಿಹಾಸ ಚಿತ್ರದ ಈ ಗೀತೆಯನ್ನು ಚಿ.ಉದಯಶಂಕರ್ ರಚಿಸಿ, ಎಸ್.ಜಾನಕಿ ಹಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಹಾಡು ಹಂಚಿಕೊಂಡಿರುವ ಮೋದಿ, ‘ದೇವಿಯು ಭಕ್ತರಿಗೆ ಸುಖ, ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ’ ಎಂದು ಪ್ರಾರ್ಥಿಸಿದ್ದಾರೆ. ಖ್ಯಾತ ಆಡಿಯೋ ಕಂಪನಿ ಲಹರಿಯ ಸಹೋದರ ಸಂಸ್ಥೆಯಾದ ಎಂಆರ್‌ಟಿ ಮ್ಯೂಸಿಕ್‌ನಲ್ಲಿ ಈ ಹಾಡು ಮೂಡಿ ಬಂದಿದೆ. ಇದೀಗ, ಈ ಹಾಡು ಮತ್ತೆ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನೂ ಓದಿ: RSS ಸ್ವಯಂಸೇವಕರ ಪ್ರತಿಯೊಂದು ಕೆಲಸವೂ ದೇಶ ಮೊದಲು ಅನ್ನೋದನ್ನ ಕಲಿಸುತ್ತೆ – ಮೋದಿ ಮನದ ಮಾತು

ಮೋದಿ ಎಕ್ಸ್‌ ಖಾತೆಯಲ್ಲೇನಿದೆ?
ನವರಾತ್ರಿಯ ಸಮಯದಲ್ಲಿ, ದೇವಿಯು ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಮೋದಿ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಈ ಹಾಡು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಅವರಿಗೆ ಅನೇಕರು ಕಾಮೆಂಟ್ಸ್‌ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ: ಹೆಚ್‌ಆರ್‌ ರಂಗನಾಥ್‌