ಕರ್ನಾಟಕದ ರ‍್ಯಾಲಿಗೆ ಸೇರುವ ಜನಸ್ತೋಮ ನೋಡಿ ಕೈ, ದಳಕ್ಕೆ ಹೆದರಿಕೆ: ಮೋದಿ

ನವದೆಹಲಿ: ಗುರುವಾರದಂದು ಕರ್ನಾಟಕದ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಾಗಲಕೋಟೆ ಹಾಗೂ ಚಿಕ್ಕೋಡಿಯಲ್ಲಿ ಸೇರಿದ್ದ ಜನಸ್ತೋಮ ನೋಡಿ ಫುಲ್ ಖುಷ್ ಆಗಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ತಮಗೆ ಸಿಗುತ್ತಿರುವ ಬೆಂಬಲ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ದಂಗಾಗಿ ಹೋಗಿದೆ ಎಂದು ಮೈತ್ರಿ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.

ಬಾಗಲಕೋಟೆ ಹಾಗೂ ಚಿಕ್ಕೋಡಿಯಲ್ಲಿ ಗುರುವಾರ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರು ಹಾಗೂ ಅವರ ಬೆಂಬಲವನ್ನು ನೋಡಿ ಮೋದಿ ಖುಷ್ ಆಗಿದ್ದಾರೆ. ಅಲ್ಲದೆ ಈ ಬೆಂಬಲ, ಜನಸ್ತೋಮ ನೋಡಿ ರಾಜ್ಯದಲ್ಲಿರುವ ದೋಸ್ತಿ ಸರ್ಕಾರ ಹೆದರಿದೆ ಎಂದು ಬರೆದು ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಸಮಾವೇಶಕ್ಕೆ ಬಂದಿದ್ದ ಜನಸ್ತೋಮದ ಫೋಟೋವನ್ನು ಅಪ್ಲೋಡ್ ಮಾಡಿ, ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

https://www.facebook.com/narendramodi/posts/10161706760940165

ಪೋಸ್ಟ್ ನಲ್ಲಿ ಏನಿದೆ?
ಕರ್ನಾಟಕದಲ್ಲಿ ನಡೆಯುವ ನನ್ನ  ರ‍್ಯಾಲಿಯಲ್ಲಿ ಸೇರುತ್ತಿರುವ ಜನಸಾಗರವನ್ನ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಭಯ ಹುಟ್ಟಿಸಿದೆ. ಮೇ 23ರಕ್ಕೆ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಅವರಿಗೆ ಇನ್ನೂ ದೊಡ್ಡ ಶಾಕ್ ಆಗಲಿದೆ. ಬಾಗಲಕೋಟೆ ಹಾಗೂ ಚಿಕ್ಕೋಡಿಯ ಫೊಟೋಗಳನ್ನು ಶೇರ್ ಮಾಡುತ್ತಿದ್ದೇನೆ ಎಂದು ಬರೆದು ಫೋಟೋ ಜೊತೆಗೆ ಫೇಸ್‍ಬುಕ್‍ನಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಅನ್ನು ಸುಮಾರು 80 ಸಾವಿರ ಮಂದಿ ಲೈಕ್ ಮಾಡಿದ್ದಾರೆ ಹಾಗೂ 2,500 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, 5,500ಕ್ಕೂ ಹೆಚ್ಚು ಮಂದಿ ಮೋದಿಯವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ಮಗ್ಳೂರು ಸಮಾವೇಶಕ್ಕೆ ಮೆಚ್ಚುಗೆ:
ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನಸ್ತೋಮ ಪ್ರಧಾನಿ ಮೋದಿ ಅವರಿಗೆ ಆಶ್ಚರ್ಯ ತಂದಿತ್ತು. ಡಿಡಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ನಾನು ಹಲವು ರ‍್ಯಾಲಿಯಲ್ಲಿ ಈಗ ಭಾಗವಹಿಸುತ್ತಿದ್ದೇನೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. 2014ರಲ್ಲಿ ನಾನು ಮಂಗಳೂರಿಗೆ ಹೋದಾಗ ಇಷ್ಟು ಜನ ಸೇರಿರಲಿಲ್ಲ. ಈ ಬಾರಿ ನೆರೆದ ಜನ ನೋಡಿ ನಾನು ಆಶ್ಚರ್ಯಗೊಂಡೆ ಎಂದು ತಿಳಿಸಿದ್ದರು.

ಮಂಗಳೂರಿನಲ್ಲಿ ನನ್ನ ರೋಡ್ ಶೋ ನಿಗದಿಯಾಗಿರಲಿಲ್ಲ. ನಾನು ಕಾರಿನಲ್ಲಿದ್ದಾಗ ರಸ್ತೆ ಬದಿಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಜನರನ್ನು ನೋಡಿದೆ. ಹೀಗಾಗಿ ಅವರಿಗೆ ವಂದನೆ ಸಲ್ಲಿಸಲು ನಾನು ಕಾರಿನಿಂದ ತಲೆ ಹೊರಗಡೆ ಹಾಕಿ ಕೈ ಬೀಸಿದೆ. ಈ ದೃಶ್ಯವನ್ನು ಮೇಲಿನಿಂದ ಯಾರೋ ವಿಡಿಯೋ ಮಾಡಿದ್ದು, ಆ ವಿಡಿಯೋ ಸಮುದ್ರದ ಅಲೆಯಂತೆ ಕಂಡಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *