ಮೋದಿ ನನಗಿಂತ ಹಿರಿಯ ನಟ: ಪ್ರಕಾಶ್ ರಾಜ್

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ಗೌರಿ ಸಾವನ್ನು ಸಂಭ್ರಮಿಸುವವರನ್ನು ಟ್ವಿಟರ್‍ನಲ್ಲಿ ಫಾಲೋ ಮಾಡುವ ಮೋದಿ, ಘಟನೆ ಬಗ್ಗೆ ಮೌನವಾಗಿದ್ದಾರೆ. ಅವರೊಬ್ಬ ನನಗಿಂತ ಹಿರಿಯ ನಟರು ಅಂತ ಪ್ರಕಾಶ್ ರಾಜ್ ಟೀಕಿಸಿದ್ದಾರೆ.

ದೇವಸ್ಥಾನಕ್ಕೆ ಹೋದ್ರೆ ಪ್ರಧಾನಿಯೋ, ಪೂಜಾರಿಯೋ ಅಂತಾನೆ ಗೊತ್ತಾಗಲ್ಲ, ಇವ್ರ ನಟನೆ ನೋಡಿದ್ರೆ ನನಗೆ ಬಂದಿರುವ ಐದು ಪ್ರಶಸ್ತಿಗಳನ್ನು ಮೋದಿಗೆ ನೀಡೋಣ ಅನಿಸುತ್ತೆ. ವೃತ್ತಿ ಪರ ನಟರನ್ನೂ ಅವರು ನಾಚಿಸುತ್ತಾರೆ ಅಂತಾ ವ್ಯಂಗ್ಯವಾಡಿದ್ದಾರೆ.

 

ಮೋದಿ ಬಗ್ಗೆ ಟೀಕೆ ಮಾಡಿರುವ ನಟ ಪ್ರಕಾಶ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ಬಗ್ಗೆ ಕೇಳಿದಾಗ ನಾನೊಬ್ಬ ನಾಯಕನಟ ಅಂತ ಕೆಂಡಾಮಂಡಲವಾದ ಪ್ರಕಾಶ್ ರೈ, ಕಾನೂನು ವ್ಯವಸ್ಥೆ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಅವರನ್ನ ಕೇಳುವ ಬದಲು ಮೋದಿ ಅವರನ್ನು ಯಾಕೆ ಎಳೀತಿದ್ದೀಯಪ್ಪಾ ಖಳನಟ ಅಂತ ಫೇಸ್‍ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *