ಲಕ್ನೋದಲ್ಲಾದ ಕಾಶ್ಮೀರಿಗರ ಹಲ್ಲೆ ಖಂಡಿಸಿದ ಪ್ರಧಾನಿ ಮೋದಿ

– ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಯುಪಿ ಸರ್ಕಾರಕ್ಕೆ ಸೂಚನೆ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೆಲ ಕಿಡಿಗೇಡಿಗಳು ಕಾಶ್ಮೀರಿ ಜನರ ಮೇಲೆ ನಡೆಸಿದ ಹಲ್ಲೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಕಾಶ್ಮೀರಿಗರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಕಾನ್ಪುರ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕೆಲ ದುಷ್ಕರ್ಮಿ ಯುವಕರು ಕಾಶ್ಮೀರಿ ಸಹೋದರರ ಮೇಲೆ ಹಲ್ಲೆ ಮಾಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆವಹಿಸಲು ಎಲ್ಲ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಕಾಶ್ಮೀರದ ಜನರ ಮೇಲೆ ಹಲ್ಲೆ ಮಾಡಿದ ಕೆಲವು ಘಟನೆಗಳ ಬಗ್ಗೆ ನಾನು ಕೇಳಿದ್ದೇನೆ. ಈ ನಿಟ್ಟಿನಲ್ಲಿ ದೇಶಕ್ಕೆ ಒಂದು ಸಂದೇಶ ನೀಡುತ್ತಿರುವೆ. ಕಾಶ್ಮೀರದ ಜನರನ್ನು ನಮ್ಮವರು ಎನ್ನುವ ಗುಣ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನಮ್ಮ ಹೋರಾಟ ಕಾಶ್ಮೀರಿ ಜನರೊಂದಿಗಲ್ಲ. ಪ್ರತ್ಯೇಕವಾದಿಗಳು ಹಾಗೂ ಉಗ್ರರ ಜೊತೆಗೆ ನಾವು ಹೋರಾಡಬೇಕಿದೆ. ಭಯೋತ್ಪಾದಕರನ್ನು ಹೊಡೆದು ಹಾಕಲು ಕಾಶ್ಮೀರದ ಜನತೆಯ ಸಹಾಯ ಪಡೆಯಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.

ಆಗಿದ್ದೇನು?:
ಇಬ್ಬರು ಕಾಶ್ಮೀರದ ವ್ಯಾಪಾರಿಗಳು ಲಕ್ನೋದಲ್ಲಿ ಬುಧವಾರ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಕೇಸರಿ ಬಣದ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿತ್ತು. ಈ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *