ಮೋದಿ ನಿಜವಾದ ದೇಶಭಕ್ತ- `Make In India’ ಪರಿಕಲ್ಪನೆ ಹೊಗಳಿದ ರಷ್ಯಾ

ಮಾಸ್ಕೋ: ಮೋದಿ (Narendra Modi) ನಿಜವಾದ ದೇಶಭಕ್ತ ಎಂದಿರುವ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ.

ಮಾಸ್ಕೋ ಮೂಲದ ಚಿಂತಕರ ಚಾವಡಿಯ ವಾಲ್ಡೈ ಚರ್ಚಾ ಕ್ಲಬ್‌ನ ವಾರ್ಷಿಕ ಭಾಷಣದಲ್ಲಿ ಮಾತನಾಡಿದ ಪುಟಿನ್, ಮೋದಿ ನಿಜವಾದ ದೇಶಭಕ್ತ. ತಮ್ಮ ನಾಯಕತ್ವದಲ್ಲಿ ದೇಶಕ್ಕೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕವಾಗಿ ಮುಖ್ಯವಾಗಿದೆ. ಅಲ್ಲದೇ ಭಾರತದ ಬೆಳವಣಿಗೆಯು ಬ್ರಿಟಿಷ್ ವಸಾಹತುಗಳ ಅಭಿವೃದ್ಧಿಯ ಫಲಿತಾಂಶವನ್ನು ನೀಡುತ್ತದೆ ಎಂದರಲ್ಲದೇ ಭಾರತ (India) ಮತ್ತು ರಷ್ಯಾ (Russia) ನಡುವಿನ ಸಂಬಂಧವನ್ನು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

ಭಾರತದ ಕೃಷಿಗೆ (Agriculture) ಬಹಳ ಮುಖ್ಯವಾದ ರಸಗೊಬ್ಬರ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ. ನಾವೂ 7.6 ರಷ್ಟು ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಇದರಿಂದ ಕೃಷಿ ಉತ್ಪನ್ನಗಳ ವ್ಯಾಪಾರವು ದ್ವಿಗುಣಗೊಂಡಿದೆ. ಇದು ಭಾರತ ಮತ್ತು ರಷ್ಯಾ ನಡುವಿನ ಹಲವು ದಶಕಗಳ ನಿಕಟ ಮಿತ್ರ ಸಂಬಂಧದಿಂದ ಆಧಾರವಾಗಿದೆ. ನಾವು ಎಂದಿಗೂ ಯಾವುದೇ ಕಷ್ಟಕರ ಸಮಸ್ಯೆಗಳನ್ನು ಹೊಂದಿರಲಿಲ್ಲ. ಬದಲಾಗಿ ಪರಸ್ಪರ ಬೆಂಬಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಭಾರತೀಯರು ಸೇರಿದಂತೆ 20 ಮಂದಿ ಸಾವು

ರಷ್ಯಾ ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ತನ್ನ ಪ್ರಾಬಲ್ಯ ಸಾಧಿಸುವುದಕ್ಕೆ ಮುಂದಾಯಿತು. ಆದರೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅಸ್ತಿತ್ವಕ್ಕಾಗಿ ಅಪಾಯಕಾರಿ ಹಾದಿ ಹಿಡಿಯುತ್ತಿವೆ. ಇದು ಮುಂದೆ ರಕ್ತಸಿಕ್ತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *