ನನ್ನ ಫ್ರಿಯಾಗಿ ಬಿಟ್ಟು ಬಿಡಿ- ಡಿಕೆಶಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ ಇನ್ಯಾರು ಯಾರೋ ಮಾತನಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರೆಲ್ಲರ ಮಾತಿಗೆ ಉತ್ತರ ಕೊಡಲು ನನಗೆ ಟೈಂ ಇಲ್ಲ. ನನ್ನನ್ನು ಫ್ರೀಯಾಗಿ ಬಿಟ್ರೆ ಸಾಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಜಿ ಪಿಎಂ ಬಳಿಕ ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ ಕುರಿತು ಪತ್ರಕರ್ತರು ಡಿಕೆಶಿಯನ್ನು ಕೇಳಿದಾಗ, ನಾನು ಪೇಪರ್ ಓದೋದನ್ನು ಬಿಟ್ಟು ಬಿಟ್ಟಿದ್ದೇನೆ. ಹೀಗಾಗಿ ನನಗೇನೂ ಗೊತ್ತಿಲ್ಲ ಎಂದು ಉತ್ತರಿಸಲು ನಿರಾಕರಿಸಿದರು.

ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಕುಮಾರಸ್ವಾಮಿ ಆರೋಪದ ಬಗ್ಗೆಯೂ ಗೊತ್ತಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಮಾತಾಡಿದ್ದಾರೆ ಅಂತ ಹೇಳಿದ್ದಾರೆ. ಇವರ ಮಾತಿಗೆಲ್ಲ ನಾನು ಉತ್ತರ ಕೊಡೋಕೆ ಆಗುವುದಿಲ್ಲ. ಸದ್ಯ ನೀವುಗಳು (ಪತ್ರಕರ್ತರು) ನನ್ನನ್ನು ಫ್ರಿಯಾಗಿ ಬಿಟ್ರೆ ಸಾಕು ಎಂದು ತಿಳಿಸಿದ್ದಾರೆ.

ನಾನು ಒಬ್ಬ ಮುಖ್ಯಮಂತ್ರಿ ಕೈಕೆಳಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಏನೇ ಕೆಲಸ ಮಾಡಿದರೂ ನನ್ನ ಇಲಾಖೆ ಸಂಬಂಧಿಸಿದಂತೆ ಕೆಲಸಗಳಿಗೆ ನಾನು ಬದ್ಧನಾಗಿದ್ದೇನೆ ಅಷ್ಟೆ. ನನಗೆ ಯಾವ ವಿರೋಧ ಪಕ್ಷದ ನಾಯಕರು ಬೇಡ. ಕಾರು, ಮನೆ ಅರ್ಜೆಂಟಾಗಿ ಬೇಕಾದವರು ಹೋಗಲಿ. ನನಗೆ ಪರ್ಮನೆಂಟ್ ಮನೆ ಇದೆ. ನನಗೆ ಯಾವ ಅಧಿಕಾರದ ಅವಶ್ಯಕತೆ ಇಲ್ಲ ಎಂದು ಖಡಕ್ಕಾಗಿ ನುಡಿದಿದ್ದಾರೆ.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನ ಸಂಬಂಧ ಮಾತನಾಡಿದ ಡಿಕೆಶಿ, ಒಬ್ಬ ಪ್ರಬುದ್ಧ ರಾಜಕಾರಣಿಗೆ ಇಷ್ಟು ಬೇಗ ಕೊನೆಯ ದಿನಗಳು ಆಗಬಾರದಿತ್ತು. ವಿದ್ಯಾರ್ಥಿ ನಾಯಕರಾದಾಗಿನಿಂದಲೇ ಅವರನ್ನು ಬಲ್ಲೆವು. ನಾನು ಅವರನ್ನು ಅನೇಕ ಬಾರಿ ಭೇಟಿ ಮಾಡಿ ಕೆಲವು ವಿಚಾರಗಳನ್ನು ಚರ್ಚೆಸಿದ್ದೆ. ಕರ್ನಾಟಕ ರಾಜ್ಯದ ಬಗ್ಗೆ ಅಪಾರವಾದ ಆಸಕ್ತಿ ಇಟ್ಟುಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಅನುಯಾಯಿಗಳಿಗೆ ದುಃಖ ಭರಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

Comments

Leave a Reply

Your email address will not be published. Required fields are marked *