ಕ್ರಿಕೆಟ್ ಲೋಕದಲ್ಲಿ ಭಾರತೀಯರ ಪಾರುಪತ್ಯ

ಮುಂಬೈ: ಕ್ರಿಕೆಟ್ ಇಂಗ್ಲೆಂಡ್‍ನಲ್ಲಿ ಹುಟ್ಟಿಕೊಂಡರೂ, ಪ್ರಸ್ತುತ ಹೆಚ್ಚು ಜನಮನ್ನಣೆ ಗಳಿಸಿರುವುದು ಮಾತ್ರ ಭಾರತದಲ್ಲಿ. ಅಷ್ಟೆ ಅಲ್ಲದೆ ಕ್ರಿಕೆಟ್‍ನಲ್ಲಿ ಹೆಚ್ಚು ದಾಖಲೆಗಳ ಒಡೆಯರಾಗಿರುವುದು ಟೀ ಇಂಡಿಯಾದ ಆಟಗಾರರು.

ಮೂರು ಮಾದರಿ ಕ್ರಿಕೆಟ್‍ನಲ್ಲೂ ಭಾರತ ತಂಡ ಮತ್ತು ಆಟಗಾರರು ವಿಶ್ವದ ಗಮನಸೆಳೆದಿದ್ದಾರೆ. ವಿಶ್ವದ ಇತರ ತಂಡಗಳಿಗೂ ಭಾರತ ತಂಡ ಟಕ್ಕರ್ ನೀಡಿದೆ. ಅಲ್ಲದೆ ಬಹುತೇಕ ಕ್ರಿಕೆಟ್‍ನ ದಾಖಲೆಗಳನ್ನು ಭಾರತೀಯ ಆಟಗಾರರು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ

ಇದೀಗ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ನಿರ್ಮಿಸುವ ಮೂಲಕ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರರು ಅತೀ ಹೆಚ್ಚು ಪಂದ್ಯವಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: PAK Vs AUS: 24 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಟೆಸ್ಟ್ ಕ್ರಿಕೆಟ್‍ನಲ್ಲಿ 200 ಪಂದ್ಯ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 463 ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ನಿರ್ಮಿಸಿದ್ದರೆ, ಇದೀಗ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ 125 ಪಂದ್ಯಗಳನ್ನಾಡಿ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಮೂರು ಮಾದರಿ ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರರು ಪಾರುಪತ್ಯ ಸಾಧಿಸಿ ವಿಶ್ವ ಕ್ರಿಕೆಟ್‍ನಲ್ಲಿ ಮಿಂಚುಹರಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *