ದೇಶಾದ್ಯಂತ ಇಂದಿನಿಂದ ಪ್ಲಾಸ್ಟಿಕ್ ನಿಷೇಧ – ಬಸ್ಸು, ರೈಲ್ವೇ ಸ್ಟೇಷನ್‍ಗೆ ತಂದ್ರೆ ಭಾರೀ ದಂಡ

ಬೆಂಗಳೂರು: ಇಂದಿನಿಂದ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಆಗಿದೆ. ಪ್ಲಾಸ್ಟಿಕ್ ಬಳಸುತ್ತಿರುವುದನ್ನು ಕಂಡು ಬಂದರೆ ದಂಡ ವಿಧಸಲಾಗುತ್ತದೆ.

ಪ್ಲಾಸ್ಟಿಕ್ ಬ್ಯಾನ್ ಆಗಿದರೂ ಕೂಡ ಬಳಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ದೇಶದೆಲ್ಲೆಡೆ ಎಗ್ಗಿಲ್ಲದೇ ಕಾನೂನಿನ ವಿರುದ್ಧವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ.

ಈ ನಿಟ್ಟಿನಲ್ಲಿ ಗಾಂಧಿ ಜಯಂತಿ ದಿನದಿಂದ ಅಂದರೆ ಇಂದಿನಿಂದ ದೇಶಾದ್ಯಂತ ಮರು ಬಳಕೆಯಾದ ಪ್ಲಾಸ್ಟಿಕ್ ನಿಷೇಧಿಸಿ, ಆದೇಶ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ನರೇಂದ್ರ ಮೋದಿಯವರು ಈ ಆಂದೋಲನಕ್ಕೆ ನೀಡುವ ಸಾಧ್ಯತೆಯಿದೆ. ಏಕ-ಬಳಕೆಯ ಪ್ಲಾಸ್ಟಿಕ್ ಮುಕ್ತ ಭಾರತ ನರೇಂದ್ರ ಮೋದಿಯವರ ಕನಸು.

ಗಾರ್ಡನ್ ಸಿಟಿಯಾದ ಬೆಂಗಳೂರು ಗಾರ್ಬೆಜ್ ಸಿಟಿಯಾಗಿದೆ. ಅದರಲ್ಲೂ ಕಸದ ಸಮಸ್ಯೆಯೇ ತೀವ್ರವಾಗಿದೆ. ಹೀಗಾಗಿ ಬಿಬಿಎಂಪಿ 2016ರಿಂದಲೇ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ, ಪ್ಲಾಸ್ಟಿಕ್ ಬಳಕೆಗೆ 86 ಲಕ್ಷ ರೂ. ಫೈನ್ ಹಾಕಲಾಗಿದೆ.

ಇತ್ತ ಇಂದಿನಿಂದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೆ ಒಂದು ಸಾವಿರ ರೂ. ಫೈನ್ ಹಾಕಲಾಗುವುದು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ ಕುಮಾರ್ ವರ್ಮ ಅವರು ಆದೇಶಿಸಿದ್ದಾರೆ.

ರೈಲು ನಿಲ್ದಾಣದ ಜೊತೆಗೆ ಇಂದಿನಿಂದ ಬಿಎಂಟಿಸಿಯ ಎಲ್ಲಾ ಡಿಪೋಗಳು, ಕಚೇರಿ, ವರ್ಕ್ ಶಾಪ್‍ಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಎಂ.ಡಿ ಶಿಖಾ ಆದೇಶ ಹೊರಡಿಸಿದ್ದಾರೆ. ಪ್ಲಾಸ್ಟಿಕ್ ಬ್ಯಾನ್‍ಗೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *