ನೈರೋಬಿ: ಕೀನ್ಯಾದ (Kenya) ಕ್ವಾಲೆಯಲ್ಲಿ (Kwale) 12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮಂಗಳವಾರ (ಅ.28) ಬೆಳಿಗ್ಗೆ 5Y-CCA ಸಂಖ್ಯೆಯ ವಿಮಾನವು ಡಯಾನಿಯಿಂದ ಕಿಚ್ವಾ ಟೆಂಬೊಗೆ ತೆರಳುತ್ತಿತ್ತು. ವಿಮಾನದಲ್ಲಿ 12 ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಿಗ್ಗೆ 8:30ರ ಸುಮಾರಿಗೆ 0530Z ಎಂಬಲ್ಲಿ ಪತನಗೊಂಡಿದೆ ಎಂದು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (Kenya Civil Aviation Authority) ದೃಢಪಡಿಸಿದೆ.ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿದ ಪಾಕ್ – ಲೀಪಾ ಕಣಿವೆಯ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ
ಸದ್ಯ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ. ಹವಾಮಾನ ಸ್ಥಿತಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
Kenya Civil Aviation Authority (KCAA) wishes to confirm that an aircraft registration number 5Y-CCA, on its way from Diani to Kichwa Tembo crashed at 0530Z. pic.twitter.com/GXBIe9TP1V
— Kenya Civil Aviation Authority (@CAA_Kenya) October 28, 2025
ಕಿಚ್ವಾ ಟೆಂಬೊಗೆ ಬೆಳಿಗ್ಗೆ 9 ಗಂಟೆಗೆ ತಲುಪಬೇಕಿದ್ದ ವಿಮಾನದಲ್ಲಿ ಮಸಾಯಿ ಮಾರಾಗೆ ತೆರಳುತ್ತಿದ್ದ ಪ್ರವಾಸಿಗರಿದ್ದರು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ
