ರಾಜ್ಯದಲ್ಲೂ ಬಿಹಾರ ಮಾದರಿ ಹೋರಾಟಕ್ಕೆ ಪ್ಲಾನ್ – ಅನಾಮಧೇಯ ವಾಟ್ಸಪ್ ಸಂದೇಶದಿಂದ ಡೌಟ್

ಬೆಂಗಳೂರು: ರಾಜ್ಯದಲ್ಲಿ ಅಗ್ನಿಪಥ್ ಯೋಜನೆ ಪರ ವಿರೋಧದ ಚರ್ಚೆಗಳು ನಡೀತಿವೆ. ಅಗ್ನಿಪಥ್ ಯೋಜನೆ ವಿರೋಧಿಸಿ ಸೇನಾ ಆಕಾಂಕ್ಷಿಗಳು ನಾಳೆ ಬೆಳಗಾವಿ ಬಂದ್‍ಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆಗೆ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೆಳಗಾವಿ, ಬಾಗಲಕೋಟ, ಧಾರವಾಡ ಜಿಲ್ಲೆಗಳ ಯುವಕರಿರುವ ವಾಟ್ಸಪ್ ಗ್ರೂಪ್‍ಗಳಲ್ಲಿ ಅನಾಮಧೇಯ ಸಂದೇಶಗಳು ಹರಿದಾಡುತ್ತಿವೆ.

ತೆಲಂಗಾಣ, ಉತ್ತರಪ್ರದೇಶ, ಬಿಹಾರ ಹಾಗೂ ಗೋವಾದಲ್ಲಿ ಎಲ್ಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ನಮ್ಮಲ್ಲಿ ಮಾತ್ರ ಕೆಲವೇ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾವಾರು ಪ್ರತಿಭಟನೆ ಮಾಡಿದ್ರೆ ಏನು ಪ್ರಯೋಜನ? ಎಲ್ಲೆಡೆ ಗೊತ್ತಾಗುವ ಹಾಗೇ ನಾವು ಹೋರಾಟ ಮಾಡೋಣ. ಕರ್ನಾಟಕ ಬಂದ್‍ಗೆ ಕರೆ ನೀಡಿ ಎಂದು ಸಂದೇಶ ವೈರಲ್ ಆಗಿದೆ. ಇದನ್ನೂ ಓದಿ: ನಾಳೆ ಏನಾದ್ರೂ ಅಹಿತಕರ ಘಟನೆ ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸಿದ್ಧ: ಬೋರಲಿಂಗಯ್ಯ

ನಾಳೆಯ ಪ್ರತಿಭಟನೆಗೆ ಎಸ್‍ಯುಸಿಐ ಪಕ್ಷದ ಯುವ ವಿಭಾಗ ಎಐಡಿವೈಓ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರತಿಭಟನೆ ಹೆಸರಲ್ಲಿ ಪ್ರಚೋದಿಸುವುದು, ಕಲ್ಲೆಸೆಯುವಂತಹ ಕಾನೂನು ಬಾಹಿರ ಕೃತ್ಯ ಕಂಡು ಬಂದ್ರೆ ಕ್ರಿಮಿನಲ್ ಕೇಸ್ ಹಾಕೋದಾಗಿ ಬೆಳಗಾವಿ ಪೊಲೀಸರು ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದನ್ನೂ ಓದಿ: ನನ್ನ ಕಚೇರಿ ಹೆಸರು ದುರ್ಬಳಕೆ ಮಾಡಿದವರ ಬಗ್ಗೆ ದೂರು ಕೊಟ್ಟಿದ್ದೇನೆ: ಶೋಭಾ ಕರಂದ್ಲಾಜೆ

ಇಂದು ಸಾಂಕೇತಿಕ ಸತ್ಯಾಗ್ರಹ ನಡೆಸಿದ ಶಾಸಕಿ ಅಂಜಲಿ ನಿಂಬಾಳ್ಕರ್ ನಾಳೆ ಖಾನಾಪುರ ಬಂದ್‍ಗೆ ಕರೆ ನೀಡಿದ್ದಾರೆ. ನಿನ್ನೆ ಧಾರವಾಡದಲ್ಲಿ ನಡೆದಿದ್ದ ಗಲಾಟೆ ಸಂಬಂಧ 30ಕ್ಕೂ ಹೆಚ್ಚು ಮಂದಿ ವಿರುದ್ಧ ಪೊಲೀಸರು ದೊಂಬಿ ಕೇಸ್ ದಾಖಲಿಸಿದ್ದಾರೆ. ಈ ಮಧ್ಯೆ, ಹಿಂಸಾತ್ಮಕ ಪ್ರತಿಭಟನೆಗಳಿಂದ ಹಲವು ರೈಲು ರದ್ದಾಗಿರೋದ್ರಿಂದ ಕಾಶಿಯಾತ್ರೆಗೆ ತೆರಳಿದ್ದ ನೂರಕ್ಕೂ ಹೆಚ್ಚು ಕನ್ನಡಿಗರು ಈಗ ವಾರಣಾಸಿಯಲ್ಲಿ ಅತಂತ್ರರಾಗಿದ್ದಾರೆ.

Live Tv

Comments

Leave a Reply

Your email address will not be published. Required fields are marked *