ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾನುವಾರ ಜೆ.ಪಿ. ನಗರ 1ನೇ ಹಂತದಲ್ಲಿರುವ ಎಸ್‌ಬಿಐ ಕಾಲೋನಿಯಲ್ಲಿ ಪೈಪ್‌ಲೈನ್ ಅನಿಲ (PNG) ಕಾಮಗಾರಿಗೆ ಚಾಲನೆ ನೀಡಿದರು.
ನಗರದ ಮನೆಗಳಿಗೆ ಸ್ವಚ್ಛ, ಸುರಕ್ಷಿತ ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿ ಶಕ್ತಿಯನ್ನು ಒದಗಿಸುವ ದಿಕ್ಕಿನಲ್ಲಿ ಈ ಯೋಜನೆಯು ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸಂದರ್ಭದಲ್ಲಿ ಪಿಎನ್‌ಜಿಯ ಆರ್ಥಿಕ ಪ್ರಯೋಜನಗಳನ್ನು ವಿವರಿಸಿದ ಸಂಸದ ಸೂರ್ಯ ಅವರು, ಕುಟುಂಬಗಳು ಪ್ರತಿ ಸಿಲಿಂಡರ್ ಮೇಲೆ ಸರಾಸರಿ 200 ರಿಂದ 300 ರೂ. ಉಳಿತಾಯವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಎಂ ಅವರೇ ರೈತರ ಮುಂದೆ ತೊಡೆ ತಟ್ಟುತ್ತಿದ್ದೀರಿ, ನಿಮ್ಮ ತೊಡೆ ಮುರಿಯುವ ಕಾಲ ದೂರವಿಲ್ಲ: ನಿಖಿಲ್

ಪಿಎನ್‌ಜಿ ಸಾಂಪ್ರದಾಯಿಕ ಎಲ್‌ಪಿಜಿಗಿಂತ ಹೆಚ್ಚು ಸುರಕ್ಷಿತ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವು ಬೆಂಗಳೂರಿನಲ್ಲಿ ಶೇ.100 ರಷ್ಟು ಪಿಎನ್‌ಜಿ ವ್ಯಾಪ್ತಿಯನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣದಲ್ಲಿ ಇಲ್ಲಿಯವರೆಗೆ ಬೊಮ್ಮನಹಳ್ಳಿ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದ ನಿವಾಸಿಗಳು ಪೈಪ್‌ಲೈನ್ ಅನಿಲ ಸಂಪರ್ಕವನ್ನು ಪಡೆಯುತ್ತಿದ್ದು, ಎಸ್‌ಬಿಐ ಲೇಔಟ್‌ನಲ್ಲಿ ಪಿಎನ್‌ಜಿ ಯೋಜನೆಗೆ ಅಂದಾಜು 1.5 ರಿಂದ 2 ಕೋಟಿ ರೂ. ವೆಚ್ಚವಾಗಲಿದೆ. ಸಂಪೂರ್ಣ ವ್ಯವಸ್ಥೆಯನ್ನು ಗೇಲ್ (GAIL) ಒದಗಿಸಲಿದೆ. ಇದನ್ನೂ ಓದಿ: ರಾಯಚೂರು | ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು
