ದಾವಣಗೆರೆ: ವಾಲ್ ಮ್ಯಾನ್ ಮೇಲೆ ಬಿಡಾಡಿ ಹಂದಿ ದಾಳಿ ಮಾಡಿ ಆತನ ಮರ್ಮಾಂಗವನ್ನು ಕಚ್ಚಿದ ಘಟನೆ ದಾವಣಗೆರೆ ನಗರದ ಜಾಲಿ ನಗರದಲ್ಲಿ ನಡೆದಿದೆ.
ಎಚ್.ಎನ್ ಮಂಜುನಾಥ್ ಗಂಭೀರ ಗಾಯಗೊಂಡ ವಾಲ್ ಮ್ಯಾನ್. ಜಾಲಿನಗರಕ್ಕೆ ನೀರು ಬಿಡುಲು ವಾಲ್ ತಿರುಗಿಸಲು ಹೋದಾಗ ಈ ಘಟನೆ ನಡೆದಿದೆ. ಬಿಡಾಡಿ ಹಂದಿ ದಾಳಿ ಮಾಡುವಾಗ ಮಂಜುನಾಥ್ ತೊಡೆಯ ಭಾಗ ಮತ್ತು ಮರ್ಮಾಂಗವನ್ನು ಕಚ್ಚಿದೆ.
ಸದ್ಯ ಗಾಯಗೊಂಡ ಮಂಜುನಾಥ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ದಿನೇ ದಿನೇ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply