ಧಾರವಾಡ: ಕಸ ಎಸೆಯಲೆಂದು ಹೋದಾಗ ಮಹಿಳೆಯೊಬ್ಬರ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮ ಕಾಲಿಗೆ ತೀವ್ರ ಗಾಯವಾಗಿರುವ ಘಟನೆ ಧಾರವಾಡ ನಗರದ ಗೌಳಿ ಗಲ್ಲಿಯಲ್ಲಿ ಸಂಭವಿಸಿದೆ.

ಅನಿತಾ ಜಮಾದಾರ ಎಂಬವರು ಕಸ ಎಸೆಯಲೆಂದು ಹೋದಾಗ ಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಕೈ ಹಾಗೂ ಕಾಲಿಗೆ ತೀವ್ರ ಪರಿಚಿದ ಗಾಯಗಳಾಗಿವೆ. ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ
ಗೌಳಿ ಗಲ್ಲಿಯಲ್ಲಿ ಹಂದಿಗಳ ಕಾಟ ಜೋರಾಗಿದ್ದು, ಸದ್ಯ ಅನಿತಾ ಅವರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಅಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

Leave a Reply