ದಾವಣಗೆರೆಯಲ್ಲಿ ಹಂದಿ ದಾಳಿ- 3 ವರ್ಷದ ಕಂದಮ್ಮ ಗಂಭೀರ ಗಾಯ

ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿಯಾದ್ರೆ, ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಕ್ಕಳು ಹಂದಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಶನಿವಾರ ಸಂಜೆ ನಗರದ ಬೇತೂರು ರಸ್ತೆಯ ಮುದ್ದ ಬೋವಿ ಕಾಲೋನಿಯಲ್ಲಿ ಹಂದಿ ದಾಳಿಗೆ ಮೂರು ವರ್ಷದ ಕಂದಮ್ಮ ಗಂಭೀರವಾಗಿ ಗಾಯಗೊಂಡಿದೆ.

ಸೃಜನ್ ಎಂಬ ಪುಟ್ಟ ಕಂದಮ್ಮ ಹಂದಿ ದಾಳಿಗೆ ಒಳಗಾಗಿದ್ದಾನೆ. ಮುದ್ದ ಬೋವಿ ಕಾಲೋನಿ ನಿವಾಸಿ ಗಣೇಶ್ ಮತ್ತು ಶಾರದ ದಂಪತಿ ಪುತ್ರ ಸೃಜನ್ ಶನಿವಾರ ಸಂಹೆ ಮನೆಯ ಮುಂದೆ ಆಟವಾಡುತ್ತಿದ್ದನು. ಏಕಾಏಕಿ ಬಾಲಕನ ಮೇಲೆ ಎಗರಿದ ಹಂದಿ ಆತನ ಕಿವಿ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಇದೇ ದಂಪತಿಯ ಹಿರಿಯ ಪುತ್ರ ಚಂದ್ರು ಮೇಲೆಯೂ ಹಂದಿಗಳು ದಾಳಿ ನಡೆಸಿದ್ದವು.

ಕಳೆದ ಮೂರು ತಿಂಗಳಲ್ಲಿ ಇದು ನಾಲ್ಕನೇ ದಾಳಿಯಾಗಿದೆ. ಬಿಡಾಡಿ ಹಂದಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯ ನಿವಾಸಿಗಳು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಮಹಾನಗರ ಪಾಲಿಕೆ ಹಂದಿಗಳ ಹಾವಳಿ ತಡೆಯುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *