‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

ನೋಜ್ ನಾಯಕನಟನಾಗಿ ನಟಿಸುತ್ತಿರುವ `ಟಕ್ಕರ್’ ಚಿತ್ರ ಒಂದಲ್ಲಾ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಲೇ ಇದೆ. ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಈಗಾಗಲೇ ಬಹುಪಾಲು ಚಿತ್ರೀಕರಣವನ್ನೂ ಪೂರೈಸಿದೆ.

ಮೈಸೂರಿನಲ್ಲಿ ಸರಿಸುಮಾರು ಒಂದು ತಿಂಗಳ ಕಾಲ ಬೀಡುಬಿಟ್ಟು ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು ನಂತರ ಬೆಂಗಳೂರಿಗೆ ಬಂದು, ನಾಗರಬಾವಿ ರಿಂಗ್ ರಸ್ತೆ, ಹೆಚ್.ಎಂ.ಟಿ. ಫ್ಯಾಕ್ಟರಿ ಮತ್ತು ಕಂಠೀರವ ಸ್ಟುಡಿಯೋ ಸೇರಿದಂತೆ ಒಂದಷ್ಟು ಕಡೆ ಚಿತ್ರದ ಸಾಹಸ ದೃಶ್ಯಗಳನ್ನು ಕೂಡಾ ಚಿತ್ರೀಕರಿಸಲಾಗಿತ್ತು.

ಮೊನ್ನೆ ಹೆಚ್.ಎಂ.ಟಿ. ಗ್ರೌಂಡ್‍ನಲ್ಲಿ ನಡೆದ ಹೀರೋ ಇಂಟ್ರಡಕ್ಷನ್ ಫೈಟ್ ಇಡೀ ಚಿತ್ರರಂಗದ ಗಮನ ಸೆಳೆದಿದೆ. ಅತ್ಯಂತ ದುಬಾರಿ ಬಾಡಿಗೆಯ ಹತ್ತು ಸೆಕೆಂಡುಗಳಿಗೆ ಸಾವಿರ ಫ್ರೇಮುಗಳನ್ನು ಕ್ಯಾಪ್ಚರ್ ಮಾಡುವ ಫ್ಯಾಂಟಮ್ ಕ್ಯಾಮೆರಾವನ್ನು ಈ ಚಿತ್ರೀಕರಣಕ್ಕೆ ಬಳಸಲಾಗಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

ಬಿಗ್ ಬಜೆಟ್ ಸಿನಿಮಾಗಳಲ್ಲಿ ಮತ್ತು ಸೂಪರ್ ಸ್ಟಾರ್ ಗಳ ಚಿತ್ರಗಳು ಸೇರಿದಂತೆ ಅಪರೂಪಕ್ಕೆ ಬಳಸುವ ಈ ಕ್ಯಾಮೆರಾವನ್ನು `ಟಕ್ಕರ್’ ಚಿತ್ರಕ್ಕಾಗಿ ಹೈದ್ರಾಬಾದಿನಿಂದ ತರಿಸಲಾಗಿತ್ತು. ರಂಗಿತರಂಗ, ರಾಜರಥ, ಇರುವುದೆಲ್ಲವ ಬಿಟ್ಟು ಮೊದಲಾದ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಕ್ರಿಯಾಶೀಲ ಕ್ಯಾಮರಾಮೆನ್ ಎಂದೇ ಹೆಸರಾಗಿರುವ ವಿಲಿಯಮ್ ಡೇವಿಡ್ ಫ್ಯಾಂಟಮ್ ಕ್ಯಾಮೆರಾದಲ್ಲಿ `ಟಕ್ಕರ್’ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅಂದ ಹಾಗೆ, ಟಕ್ಕರ್ ಚಿತ್ರದ ಎಲ್ಲಾ ಸಾಹಸ ದೃಶ್ಯಗಳನ್ನೂ ಖ್ಯಾತ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹೊಸಾ ಬಗೆಯಲ್ಲಿ ಸಂಯೋಜಿಸಿರೋದು ವಿಶೇಷ.

ಇನ್ನು ಈ ಚಿತ್ರದಲ್ಲಿ ಪುಟ್‍ಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಲೋಕಿ ಮನೋಜ್ ಎದುರು ಟಕ್ಕರ್ ಕೊಡುವ ವಿಲನ್ ಆಗಿ ಮಿಂಚಿದ್ದಾರೆ. ಚಿತ್ರೀಕರಣವನ್ನು ಬಹುತೇಕ ಕಂಪ್ಲೀಟ್ ಮಾಡಿರುವ `ಟಕ್ಕರ್’ ಟೀಮ್ ಉಳಿದಿರುವ ಹಾಡಿನ ಚಿತ್ರೀಕರಣಕ್ಕಾಗಿ ತಯಾರಿ ನಡೆಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *