ಮಂಡ್ಯ: ಮಳವಳ್ಳಿ ತಾಲೂಕಿನ ಪುರ ಪೊಲೀಸ್ ಠಾಣೆಗೆ ಸಮೀಪದಲ್ಲಿರುವ ಸಿದ್ದಾರ್ಥ ನಗರದಲ್ಲಿ ಒಂದೇ ರಾತ್ರಿ 15ಕ್ಕೂ ಹೆಚ್ಚು ಬೈಕ್‍ಗಳ ಪೆಟ್ರೋಲ್ ಪೈಪ್ ಕತ್ತರಿಸಿ ಪೆಟ್ರೋಲ್ ಕದಿಯಲಾಗಿದೆ.
ಸಿದ್ದಾರ್ಥ ನಗರದ 3, 4, 5ನೇ ಕ್ರಾಸ್ ನಲ್ಲಿ ಮನೆಗಳ ಮುಂದೆ, ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್‍ಗಳ ಪೆಟ್ರೋಲ್ ಪೈಪ್ ಕತ್ತರಿಸಿ, ಪೆಟ್ರೋಲ್ ಕದ್ದಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಜೂನಿಯರ್ ಕಾಲೇಜು, ಸಿದ್ದಾರ್ಥನಗರ ಹೊಸ ಬಡಾವಣೆ ಬಳಿ ಇದೇ ರೀತಿ ಘಟನೆ ನಡೆದಿತ್ತು. ಕೆಲ ದಿನಗಳ ಅಂತರದಲ್ಲೇ ಲೀಸ್ ಠಾಣೆ ಸಮೀಪವೇ ಅದೇ ರೀತಿ ಘಟನೆ ನಡೆದಿದ್ದು, ಸಾಕಷ್ಟು ಆತಂಕಕ್ಕೀಡು ಮಾಡಿದೆ. ಇದನ್ನೂ ಓದಿ: ದಿಢೀರ್ ಎರಡು ಹೋಳಾಗಿ ಧರೆಗುರುಳಿದ ನೂರಾರು ವರ್ಷದ ಅರಳಿಮರ

ಬೆಳಿಗ್ಗೆ ಬೈಕ್ ತೆಗೆಯಲು ಹೋದಾಗ ಪೆಟ್ರೋಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಪೆಟ್ರೋಲ್ ಪೈಪ್, ಕತ್ತರಿಸಲಾಗಿದ್ದು, ಪೆಟ್ರೋಲ್ ಹಾಕಿಸಲು ಪರದಾಡಬೇಕಾಯಿತು. ಇದನ್ನೂ ಓದಿ: ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

ಘಟನೆಗೆ ಸಂಬಂಧಿಸಿದಂತೆ ಬೈಕ್ ಗಳ ಮಾಲೀಕರು ದೂರು ಸಲ್ಲಿಸಲು ಪುರ ಪೊಲೀಸ್ ಠಾಣೆಗೆ ತೆರಳಿದಾಗ ದೂರು ಸ್ವೀಕರಿಸದೆ, ಸ್ಥಳಕ್ಕಾಗಮಿಸಿ ಬೀಟ್ ವ್ಯವಸ್ಥೆಯನ್ನು ಸುಧಾರಿಸುವ ಭರವಸೆಯನ್ನು ಪೊಲೀಸರು ನೀಡಿದರು. ದೂರು ಸ್ವೀಕರಿಸದ ಪೊಲೀಸರ ನಡೆ ಬಗ್ಗೆ ಬೈಕ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡನೇ ಬಾರಿ ಘಟನೆ ನಡೆದಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

Leave a Reply