ಬ್ರೇಕ್ ಫೇಲ್ ಆಗಿ ಟ್ಯಾಂಕರ್ ಪಲ್ಟಿ – ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಂಡ ಜನ

ವಿಜಯಪುರ: ಬ್ರೇಕ್ ಫೇಲ್ ಆಗಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಪೆಟ್ರೋಲ್ ಸೋರಿಕೆಯಾದ ಘಟನೆ ವಿಜಯಪುರ ಹೊರವಲಯದ ರಂಭಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ.

ಪಲ್ಟಿಯಾದ ಟ್ಯಾಂಕರ್‌ನಿಂದ ಪೆಟ್ರೋಲ್ ಸೋರಿಕೆಯಾಗಿದೆ. ಸೋರುತ್ತಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದ ದೃಶ್ಯ ಘಟನಾ ಸ್ಥಳದಲ್ಲಿ ಕಂಡುಬಂತು. ಇದನ್ನೂ ಓದಿ: ಮುಂಗಾರು ಮಳೆ – ಜೂನ್ 25ರ ವರೆಗೆ ರೆಡ್ ಅಲರ್ಟ್ ಘೋಷಣೆ

ಕಲಬುರಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಹೊರಟಿತ್ತು. ಈ ವೇಳೆ ಬ್ರೇಕ್ ಫೇಲ್ ಆಗಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸೋರಿಕೆಯಾದ ಪೆಟ್ರೋಲ್ ಅನ್ನು ಬಾಟಲಿಗಳಲ್ಲಿ ತುಂಬಿಕೊಂಡು ಜನ ಹೋಗುತ್ತಿದ್ದರು.

Live Tv

Comments

Leave a Reply

Your email address will not be published. Required fields are marked *