ಪೆಟ್ರೋಲ್, ಡೀಸೆಲ್ ದರ 60 ಪೈಸೆ ಇಳಿಕೆಯಾಗಿಲ್ಲ, ಇಳಿಕೆಯಾಗಿದ್ದು ಕೇವಲ 1 ಪೈಸೆ!

ನವದೆಹಲಿ: 16 ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ದರ 1 ಪೈಸೆ ಇಳಿಕೆಯಾಗಿದೆ.

ಪ್ರತಿದಿನ ತೈಲ ದರ ಪರಿಷ್ಕರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವೆಬ್‍ಸೈಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 60 ಪೈಸೆ ಇಳಿಕೆಯಾದ ಬಗ್ಗೆ ವರದಿಯಾಗಿತ್ತು.

ಈ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ ಐಓಸಿ ವೆಬ್‍ಸೈಟ್ ನಲ್ಲಿದ್ದ ತಾಂತ್ರಿಕ ಸಮಸ್ಯೆಗಳಿಂದ ತಪ್ಪಾಗಿದೆ. ಇಂದು ಒಂದು ಪೈಸೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಮೇ 15ರಿಂದ 29ರ ವರೆಗೆ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಕಳೆದ 16 ದಿನಗಳಲ್ಲಿ ಪೆಟ್ರೋಲ್‍ಗೆ ಪ್ರತಿ ಲೀಟರ್‍ಗೆ 3.8 ರೂ. ಹಾಗೂ ಡೀಸಲ್‍ಗೆ 3.38 ರೂ. ಹೆಚ್ಚಳವಾಗಿದೆ.

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‍ಗೆ 75 ಡಾಲರ್‍ನಷ್ಟು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈಗ ದರ ಕಡಿತಗೊಂಡಿದೆ. ಸಿಂಗಾಪುರ ಗ್ಯಾಸೋಲಿನ್ ಬೆಲೆ ಹಾಗೂ ಅರಬ್ ಗಲ್ಫ್ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 79.70 ರೂ. ಇದ್ದರೆ ಪ್ರತಿ ಲೀಟರ್ ಡೀಸೆಲ್ ದರ 70.49 ರೂ. ಇದೆ.

Comments

Leave a Reply

Your email address will not be published. Required fields are marked *