ಹಾಡಹಗಲೇ ಮಹಿಳೆ ಜೊತೆ ಸೆಕ್ಸ್- ಫೇಸ್‍ಬುಕ್‍ನಲ್ಲಿ ಲೈವ್ ವಿಡಿಯೋ ಮಾಡಿದ ಕಾಮುಕರ ಬಂಧನ

ವಿಜಯಪುರ: ಹಾಡಹಗಲೇ ಮಹಿಳೆಯೋರ್ವಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಸದ್ಯ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೋರ್ತಿ ಗ್ರಾಮದ ಹೊರವಲಯದಲ್ಲಿ ಬಸವರಾಜ ನಾಗರಾಜ್ ಗಡೆದ ಎಂಬಾತ ಮಹಿಳೆಯೋರ್ವಳ ಜೊತೆ ಸೆಕ್ಸ್ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಕಾಮಾಂಧರು ಇದನ್ನ ಫೇಸ್‍ಬುಕ್‍ನಲ್ಲಿ ಲೈವ್ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಬಸವರಾಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಅದನ್ನು ಸ್ನೇಹಿತ ರೇವಪ್ಪ ಬಸಪ್ಪ ಭೋಸ್ಗಿ ಫೇಸ್‍ಬುಕ್ ಲೈವ್ ನಲ್ಲಿ ಹರಿಬಿಟ್ಟಿದ್ದಾನೆ. ಇದನ್ನು ತಿಳಿದ ಹೋರ್ತಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾಮುಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

Comments

Leave a Reply

Your email address will not be published. Required fields are marked *