ಬೆಕ್ಕಿನ ವಿಚಾರಕ್ಕೆ ಜಗಳ- ವಿಡಿಯೋ ಮಾಡಲು ಮುಂದಾದ ಯುವತಿಗೆ ಮರ್ಮಾಂಗ ತೋರಿಸಿದ ದುರುಳ

ಚಿಕ್ಕಬಳ್ಳಾಪುರ: ಬೆಕ್ಕಿನ ವಿಚಾರದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊರ್ವ ಯುವತಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ನಡೆದಿದೆ.

ದಿವ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಗೆ ಪುರಷೋತ್ತಮ್ ಎಂಬಾತ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುರಷೋತ್ತಮ್ ವಿರುದ್ಧ ದೂರು ದಾಖಲಾಗಿದೆ.

ಏನಿದು ಗಲಾಟೆ?: ದಿವ್ಯಾ ಸಾಕಿದ್ದ ಬೆಕ್ಕು ಪಕ್ಕದ ಮನೆಯಲ್ಲೇ ವಾಸವಿರುವ ರತ್ಮಮ್ಮ ಎಂಬ ವೃದ್ಧೆಯವರ ಮನೆಯ ಮೇಲೆ ಹೋಗಿದೆ. ಹೀಗಾಗಿ ಬೆಕ್ಕನ್ನ ತರಲು ರತ್ಮಮ್ಮ ಅವರ ಮನೆಯ ಮೇಲೆ ದಿವ್ಯಾ ಹೋಗಿದ್ದಕ್ಕೆ ರತ್ಮಮ್ಮ ಹಾಗೂ ದಿವ್ಯಾ ಕುಟುಂಬಸ್ಥರ ನಡುವೆ ಜಗಳ ನಡೆದಿದೆ.

ಈ ವಿಚಾರದಲ್ಲಿ ರತ್ಮಮ್ಮನ ಪರ ಬಂದ ಮಗ ಪುರಷೋತ್ತಮ್ ದಿವ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದನ್ನ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ವೇಳೆ ಪುರಷೋತ್ತಮ್ ತನ್ನ ಪ್ಯಾಂಟ್ ಬಿಚ್ಚಿ ತಗೋ ಇದೂ ತಗೋ ಅಂತ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಪುರಷೋತ್ತಮ್ ಹಾಗೂ ದಿವ್ಯಾ ಕುಟುಂಬಸ್ಥರ ನಡುವೆ ಮನೆಯ ಜಾಗದ ವಿಚಾರದಲ್ಲಿ ವಿವಾದವಿದೆ. ಹೀಗಾಗಿ ಪ್ರತಿ ಸಣ್ಣ ಪುಟ್ಟ ವಿಚಾರಗಳಿಗೂ ರತ್ಮಮ್ಮ ಕಿರಿಕ್ ತೆಗೆದು ಗಲಾಟೆ ಮಾಡುತ್ತಾರೆ ಎಂದು ಹೇಳಲಾಗಿದೆ. ಈ ವೇಳೆ ಅಮ್ಮನ ಪರ ವಕಾಲತ್ತು ವಹಿಸಿಕೊಂಡು ಬರುವ ಇಬ್ಬರು ಮಕ್ಕಳಾದ ಪುರಷೋತ್ತಮ್ ಹಾಗೂ ಮಹೇಶ್ ದಿವ್ಯಾ ಹಾಗೂ ಅವರ ಅಕ್ಕ ಅಂಜುಮ್ ಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. ನಮ್ಮ ಮನೆಯ ಮುಂದೆಯೇ ಮೂತ್ರವಿಸರ್ಜನೆ ಮಾಡೋದು, ಸಿಗರೇಟ್ ಸೇದೋದು, ಮದ್ಯದ ಬಾಟಲಿ ಮನೆಯ ಮೇಲೆ ಬಿಸಾಡಿ ಕಿರುಕುಳ ನೀಡುತ್ತಿದ್ದಾರೆ ಅಂತ ದಿವ್ಯಾ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *