ಗಂಡಸ್ತನ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಮಂಡ್ಯ: ಗಂಡಸ್ತನದ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸಾಗರ್ ಕೊಲೆಗೀಡಾದ ಯುವಕ. ಸಾಗರ್ ತನ್ನ ಸ್ನೇಹಿತ ಕುಂಟನಹಳ್ಳಿ ಪ್ರಸಾದ್‍ನ ಬರ್ತಡೇ ಪಾರ್ಟಿಗೆ ಕೊಪ್ಪದ ಸಿಂಚನ ಡಾಬಾಗೆ ಕಳೆದ ವಾರ ಹೋಗಿದ್ದನು. ಕೇಕ್ ಕಟ್ ಮಾಡಿಸಿ ನಂತರ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ. ಪಾರ್ಟಿ ಮುಗಿಸಿದ ಮೇಲೆ ಜೊತೆಯಲ್ಲಿದ್ದ ಸ್ನೇಹಿತರೇ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಂದ ಚುಚ್ಚಿ ಪರಾರಿಯಾಗಿದ್ದಾರೆ.

ಸಾಗರ್‌ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಆತನ ಸ್ನೇಹಿತರಾದ ಹುರುಗಲವಾಡಿ ಗಿರಿ, ಪುನೀತ್, ರಾಕೇಶ್. ಈ ಹಿಂದೆ ಗಿರಿ ಸಣ್ಣ ಜಗಳದಲ್ಲಿ ಕೊಪ್ಪದವರು ಗಂಡಸರಲ್ಲಾ ಎಂದು ಬೈದಿದ್ದನು. ಇದೇ ವಿಚಾರ ಪಾರ್ಟಿಯಲ್ಲಿ ಪ್ರಸ್ತಾಪವಾದ ವೇಳೆ ಸಾಗರ್ ಗಂಡಸ್ತನದ ಬಗ್ಗೆ ಹೇಳ್ತೀಯಾ ಎಂದು ಗಿರಿ ಜೊತೆ ಏರು ಧ್ವನಿಯಲ್ಲಿ ಗದರುತ್ತಾನೆ.

ಈ ವೇಳೆ ಪಾರ್ಟಿಯ ಮತ್ತಿನಲಿದ್ದ ಗಿರಿ ಮತ್ತು ಸಾಗರ್ ನಡುವೆ ಜೋರಾಗಿ ಜಗಳವಾಗುತ್ತದೆ. ಕೊನೆಗೆ ಗಿರಿ ಜೊತೆ ಇದ್ದ ಪುನೀತ್ ಮತ್ತು ರಾಕೇಶ್ ಆತನನ್ನು ಹಿಡಿದುಕೊಳ್ಳುತ್ತಾರೆ.   ಈ ವೇಳೆ ಚಾಕು ತೆಗೆದುಕೊಂಡು ಗಿರಿ ಸಾಗರ್‍ನ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಾಗರ್‍ನನ್ನು ಆಸ್ಪತ್ರಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಇದೀಗ ತಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಮದ್ದೂರು ಇನ್ಸ್‍ಪೆಕ್ಟರ್ ಹರೀಶ್ ಅವರ ನೇತೃತ್ವದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಇನ್ನೊರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *