ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

ಚಾಮರಾಜನಗರ: ಕಾಲಿಗೆ ಗಾಯವಾದರೆ ರಕ್ತ ಬರುವುದನ್ನು ನೋಡಿದ್ದೀರ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ತಾಮ್ರದ ಮೊಳೆಗಳು ಹೊರಬಂದಿವೆ.

ಗ್ರಾಮದ ಮಾದಪ್ಪ ಎಂಬವರ ಕಾಲಿನಲ್ಲಿ ಗಾಯವಾದ ಜಾಗದಲ್ಲಿ ರಕ್ತದ ಬದಲು ತಾಮ್ರದ ಮೊಳೆಗಳು ಬರುತ್ತಿವೆ. ಕಳೆದ ಪೂರ್ಣಿಮೆಯಂದು ಜಮೀನಿನಿಂದ ಮನೆಗೆ ಬರುವ ವೇಳೆ ಮಾಟ ಮಾಡಿದ ಜಾಗದಲ್ಲಿ ಮಾದಪ್ಪ ಕಾಲಿಟ್ಟಿದ್ದಾರೆ. ಮಾದಪ್ಪ ಅವರಿಗೆ ಮಾಟಮಂತ್ರದ ಬಗ್ಗೆ ಹೆಚ್ಚು ನಂಬಿಕೆ ಇಲ್ಲದ ಕಾರಣ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಒಂದು ದಿನದ ನಂತರ ಪಾದದಲ್ಲಿ ದೊಡ್ಡ ಗುಳ್ಳೆಯೊಂದು ಆಗಿದೆ.

ಇದನ್ನು ಗುಣಪಡಿಸಿಕೊಳ್ಳಲು ವೈದ್ಯರ ಬಳಿ ಹೋದ ಸಂದರ್ಭದಲ್ಲಿ ಗುಳ್ಳೆಯನ್ನು ಒಡೆದು, ಔಷಧಿಯನ್ನು ನೀಡಿದ್ದಾರೆ. ಆದರೂ ಸಹ ಗಾಯ ಮಾತ್ರ ವಾಸಿಯಾಗಿರಲಿಲ್ಲ. ಮಂಗಳವಾರ ಅಮವಾಸ್ಯೆಯಾದ್ದರಿಂದ ಪತ್ನಿಯ ಒತ್ತಾಯಕ್ಕೆ ಮಣಿದು ಗುಂಡ್ಲುಪೇಟೆ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಹೋಗಿದ್ದಾರೆ. ಅಲ್ಲಿನ ಅರ್ಚಕರು ಗಾಯದ ಮೇಲೆ ನಿಂಬೆ ರಸವನ್ನು ಬಿಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಕಾಲಿನಿಂದ ಸುಮಾರು 30 ರಿಂದ 40 ತಾಮ್ರದ ಮೊಳೆಗಳು ಹೊರಬಂದಿವೆ.

Comments

Leave a Reply

Your email address will not be published. Required fields are marked *