ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಾಮೈದ ಎಂದು ಹೇಳಿಕೊಂಡು ಗೂಂಡಾಗಿರಿ- ಕಾರ್ ಗೆ ಸೈಡ್ ಬಿಡ್ಲಿಲ್ಲವೆಂದು ಚಾಲಕನ ಮೇಲೆ ಮರಣಾಂತಿಕ ಹಲ್ಲೆ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಾಮೈದ ಅಂತ ಹೇಳಿಕೊಂಡು ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ.

ಕೋರಮಂಗಲದ ಬಳಿ ಕಾರು ಮುಂದೆ ಹೋಗಲು ಬೇಗ ಸ್ಥಳಾವಕಾಶ ಮಾಡಿಕೊಡಲಿಲ್ಲ ಅಂತ ಚಾಲಕನನ್ನ ಅಡ್ಡಗಟ್ಟಿ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಾನು ಯಾರು ಗೊತ್ತಾ? ನನಗೆ ಸೈಡ್ ಬಿಡಲು ವಿಳಂಬ ಮಾಡ್ತಿಯಾ ಅಂತೆಲ್ಲಾ ಧಮ್ಕಿ ಹಾಕಿದ್ದಾನೆ.

ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಚಾಲಕ ತಿಪ್ಪೇಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ಶಾಸಕ ಸತೀಶ್ ರೆಡ್ಡಿ, ನನಗೆ ಬಾಮೈದನೇ ಇಲ್ಲ ಎಂದು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *