ನೀರು ಕೇಳುವ ನೆಪದಲ್ಲಿ ಬಂದು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ

ವಿಜಯಪುರ: ನೀರು ಕೇಳುವ ನೆಪದಲ್ಲಿ ತೋಟದ ಮನೆಯಲ್ಲಿದ್ದ 17 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರೋ ಆರೋಪ ಕೇಳಿಬಂದಿದೆ.

ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಇದ್ದ ತೋಟದ ಮನೆಗೆ ಪರಿಚಯಸ್ಥನಾದ 45 ವರ್ಷದ ಕಂಠಪ್ಪ ಕೋಣೆಗೋಳ ತನ್ನ ಮೂವರು ಸ್ನೇಹಿತರೊಂದಿಗೆ ನೀರು ಕೇಳುವ ನೆಪದಲ್ಲಿ ಬಂದಿದ್ದಾನೆ. ಬಾಲಕಿ ನೀರು ತರಲು ಒಳಗೆ ಹೋದ ವೇಳೆ ಒಳನುಗ್ಗಿ, ಬಾಲಕಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ.

ಈತನ ಕೃತ್ಯಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಸ್ನೇಹಿತರು ಕೂಡ ಸಹಕರಿಸಿದ್ದಾರೆ. ಅತ್ಯಾಚಾರದ ವೇಳೆ ಇತರೆ ಮೂವರು ಆರೋಪಿಗಳು ಬಾಲಕಿಯ ಕೈ, ಕಾಲು ಹಿಡಿದು ಹೆದರಿಸಿದ್ದಾರೆ. ಬಳಿಕ ಕಂಠೆಪ್ಪ ಸೇರಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *