ಸಿದ್ದರಾಮಯ್ಯ ಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡ್ತಿದ್ರು: ಸಿಎಂ ಇಬ್ರಾಹಿಂ

CM IBRAHIM

ಕೋಲಾರ: ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಪರ್ಸಂಟೇಜ್ ನಡೆಯುತ್ತಾ ಇತ್ತು. ಸಿದ್ದರಾಮಯ್ಯ ಅವರ ಪಕ್ಕದಲ್ಲೇ ವ್ಯವಹಾರ ಮಾಡ್ತಾ ಇದ್ರು ಅದಕ್ಕೇ ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Siddaramaiah

ಕೋಲಾದರಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರಿಗೆ ರೈತರ ಚಿಂತೆಯಾದರೆ ಕಾಂಗ್ರೆಸ್ ನವರಿಗೆ ಕುರ್ಚಿಯದ್ದೇ ಚಿಂತೆಯಾಗಿದೆ. ಕಾಂಗ್ರೆಸ್ ನಲ್ಲಿ ನಾಕಾ – ನೀಕಾ? ಎಂದು ಇಬ್ಬರು ಕಿತ್ತಾಡುತ್ತಿದ್ದಾರೆ. ಆದರೆ, ಎಚ್.ಡಿ.ದೇವೇಗೌಡರು ಸಿಂಪಲ್ ಮನುಷ್ಯ ಎರಡು ಜುಬ್ಬಾ ಎರಡು ಪಂಚೆ ಇದೆ ಅಷ್ಟೇ. ಎಸಿ- ಬಿಸಿಯಾದಾಗ ಸೈಕಲ್ ಕೂಡ ನಡೆಯುತ್ತದೆ. ಈ ಸಾಬ್ರು ಈಗ ಗೌಡರನ್ನು ಸೇರಿದ್ದಾರೆ. ಅದಕ್ಕೆ ಕಾಂಗ್ರೆಸ್‌ಗೆ ಭಯವಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ಅಂಬೇಡ್ಕರ್ ದೇವರು ಇದ್ದಂತೆ: ಸಿಎಂ

RAMESHKUMAR

ಮಾಜಿ ಸ್ಪೀಕರ್‌ಗೆ ಟಾಂಗ್: ಕೋಲಾರದ ಶ್ರೀನಿವಾಸಪುರದಲ್ಲಿ ನಡೆದ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹಿಂ, ನಪುಂಸಕನ ಕಥೆಯೊಂದನ್ನು ಹೇಳುತ್ತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಟಾಂಗ್ ನೀಡಿದ್ದಾರೆ. ಅತ್ತ ಗಂಡಸರನ್ನು ಎಣಿಸಿದರೂ ಲೆಕ್ಕದಲ್ಲಿ ಇರುತ್ತಾನೆ. ಇತ್ತ ಹೆಂಗಸರನ್ನು ಎಣಿಸದರೂ ಲೆಕ್ಕದಲ್ಲಿರುತ್ತಾನೆ. ರಮೇಶ್ ಕುಮಾರ್ ನಪುಂಸಕ ಎಂದು ತಮ್ಮಭಾಷಣದಲ್ಲಿ ಹಾಸ್ಯ ಮಾಡಿದರು.

Comments

Leave a Reply

Your email address will not be published. Required fields are marked *