ಲಾರಿ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿದ ಟೊಮೆಟೋ- ಚೀಲಗಳಲ್ಲಿ ತುಂಬಿಕೊಂಡು ಹೋದ ಸ್ಥಳೀಯರು

ಮಂಡ್ಯ: ಲಾರಿ ಉರುಳಿ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿದ್ದ ಟೊಮೆಟೋವನ್ನು ಸ್ಥಳೀಯರು ಚೀಲಗಳಲ್ಲಿ ತುಂಬಿಕೊಂಡು ಮನೆಗೆ ಸಾಗಿಸುತ್ತಿದ್ದ ದೃಶ್ಯ ಮಂಡ್ಯದಲ್ಲಿ ಕಂಡು ಬಂದಿದೆ.

ಜಿಲ್ಲೆಯ ಕೆಆರ್ ಪೇಟೆ ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ ರಸ್ತೆಯಲ್ಲಿ ಟೊಮೆಟೋ ಲಾರಿ ಉರುಳಿ ಬಿದ್ದಿದೆ. ಮೈಸೂರು ಮಾರುಕಟ್ಟೆಗೆ ರೈತರು ಟೊಮೆಟೋ ಸಾಗಿಸುತ್ತಿದ್ದು, ಲಾರಿ ಉರುಳಿ ಬಿದ್ದ ಪರಿಣಾಮ ಟೊಮೆಟೋ ರಸ್ತೆಯಲ್ಲಿ ಚೆಲ್ಲಾಡಿತ್ತು.

ತಡರಾತ್ರಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ಹರಸಾಹಸ ಪಟ್ಟು ಲಾರಿ ಮೇಲೆತ್ತಿಸಿ ತೆಗೆದುಕೊಂಡು ಹೋಗಿದ್ರು. ಆದ್ರೆ ಟೊಮೆಟೋ ಮಾತ್ರ ರಸ್ತೆ ಬದಿಯೇ ಚೆಲ್ಲಾಡಿತ್ತು.

ಇದನ್ನು ತಿಳಿದ ಸ್ಥಳೀಯರು ಬ್ಯಾಗ್‍ಗಳೊಂದಿಗೆ ಸ್ಥಳಕ್ಕೆ ಬಂದು ಟೊಮೆಟೋ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಘಟನೆಗೆ ಮೈಸೂರು, ಅರಸೀಕೆರೆ ರಸ್ತೆ ಅಲ್ಲಿಲ್ಲಿ ಗುಂಡಿ ಬಿದ್ದಿರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ರು.

Comments

Leave a Reply

Your email address will not be published. Required fields are marked *