ಬೆಂಗಳೂರು: ತಲೆಗೆ ಆಗಿದ್ದ ಗಾಯಕ್ಕೆ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧರೊಬ್ಬರನ್ನು ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ನಿವಾಸಿಗಳು ಹಾಗೂ ಸರ್ಕಾರೇತರ ಸಂಸ್ಥೆಯೊಂದು ರಕ್ಷಣೆ ಮಾಡಿ ಮಾನವಿಯತೆ ಮೆರೆದಿದ್ದಾರೆ.
ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮದ ನಿವಾಸಿ ಸಿದ್ದಲಿಂಗಪ್ಪರನ್ನು ರಕ್ಷಿಸಲಾಗಿದೆ. ಅಪಘಾತವಾಗಿ ಮನೆ ತೊರೆದಿದ್ದ ಸಿದ್ದಲಿಂಗಪ್ಪ ತಲೆಗೆ ಗಾಯಮಾಡಿಕೊಂಡು ಅದರಲ್ಲಿ ಹುಳವಾಗಿ ನರಳಾಡುತ್ತಿದ್ದರು. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಬಳಿ ಸಿದ್ದಲಿಂಗಪ್ಪ ಸ್ಥಿತಿ ಕಂಡ ಸ್ಥಳೀಯರು ಕಳೆದ ಒಂದು ವಾರದ ಹಿಂದೆ ರಕ್ಷಣೆ ಮಾಡಿ, ತಲೆಗೆ ಔಷಧಿ ಹಚ್ಚಿ, ಊಟವನ್ನು ನೀಡಿ ನೋಡಿಕೊಳ್ಳುತ್ತಿದ್ದರು.

ಸಾಮಾಜಿಕ ಜಾಲತಾಣಗಳ ಮೂಲಕ ಡಾಬಸ್ ಪೇಟೆ ನಿವಾಸಿಗಳು ಎನ್‍ಜಿಓಗಳನ್ನು ಸಂಪರ್ಕಿಸಿ, ವಯೋವೃದ್ಧನ ಬಗ್ಗೆ ತಿಳಿಸಿದ್ದರು. ಆಗ ಎಐಆರ್ ಚಾರಿಟಬಲ್ ಹೋಂ ಹಾಗೂ ಇನ್ನೀತರ ಎನ್‍ಜಿಓಗಳು ಈ ಬಗ್ಗೆ ತಿಳಿದು ಸಹಕಾರ ನೀಡಲು ಮುಂದಾದವು. ಸದ್ಯ ಸಿದ್ದಲಿಂಗಪ್ಪರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಬನ್ನೇರಘಟ್ಟದ ಎಐಆರ್ ಚಾರಿಟಬಲ್ ಹೋಂಗೆ ಸ್ಥಳೀಯರು ಸೇರಿಸಿದ್ದಾರೆ.

Leave a Reply