ಜರ್ಮನಿಯಿಂದ ದುಬೈಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ (Prajwal Revanna) ಈಗ ದುಬೈಗೆ (Dubai) ಶಿಫ್ಟ್‌ ಆಗಿದ್ದಾರೆ.

ಲೋಕಸಭಾ ಚುನಾವಣೆ (Lok Sabha Election) ಮುಗಿದ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದರು. ಬುಧವಾರ ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ನೀಡುವಂತೆ ವಿಶೇಷ ತನಿಖಾ ತಂಡದ ಬಳಿ ಮನವಿ ಮಾಡಿದ್ದರು.  ಇದನ್ನೂ ಓದಿ: ಪ್ರಜ್ವಲ್ ಮೊಬೈಲ್‍ನಿಂದ ವೀಡಿಯೋ ಲೀಕ್ ಆಗಿದ್ದೇ ರೋಚಕ!

 

ಈಗ ಜರ್ಮನಿಯಲ್ಲಿದ್ದ ಪ್ರಜ್ವಲ್‌ ರೇವಣ್ಣ ಬುಧವಾರ ರಾತ್ರಿ ದುಬೈಗೆ ಬಂದಿದ್ದಾರೆ. ದುಬೈಗೆ ಬಂದ ಹಿನ್ನೆಲೆಯಲ್ಲಿ ನೇರವಾಗಿ ಪ್ರಜ್ವಲ್‌ ರೇವಣ್ಣ ಶೀಘ್ರವೇ ಬೆಂಗಳೂರಿಗೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಕೂಡಲೇ ಈ ಪಾಸ್‌ಪೋರ್ಟ್‌ ರದ್ದುಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?