ಮೊಟ್ಟೆ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ: ಪೇಜಾವರ ಶ್ರೀ ಅಸಮಾಧಾನ

ಉಡುಪಿ: ಶಾಲೆಯಲ್ಲಿ ಮೊಟ್ಟೆ ನೀಡುವ ವಿಚಾರಕ್ಕೆ ಬಂಧಿಸಿದಂತೆ ನನ್ನ ಹೇಳಿಕೆಯನ್ನು ಕೆಲ ಮಾಧ್ಯಮಗಳು ತಿರುಚಿವೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ಮಾಧ್ಯಮಗಳ ವರದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು, ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊರಬೇಕು . ಸಮಾಜದ ಸ್ವಾಸ್ಥ್ಯ ಹಾಳುಮಾಡುವ ದುಸ್ಸಾಹಸಕ್ಕೆ ಯಾರೂ ಕೈಹಾಕಬಾರದು. ಕೆಲವು ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ. ನನ್ನ ಅಭಿಪ್ರಾಯ ತಿರುಚಿ ನನ್ನ ವಿರುದ್ದ ಸಮಾಜವನ್ನು ಎತ್ತಿಕಟ್ಟುವ ಘಟನೆ ಕಂಡಿದ್ದೇವೆ ಎಂದು ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿ ಮಠದ ವತಿಯಿಂದ ವೀಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:  ಶಾಲೆಯಲ್ಲಿ ಮೊಟ್ಟೆ ವಿತರಣೆ ಪರ ಬ್ಯಾಟ್ ಬೀಸಿದ: ರಘುಪತಿ ಭಟ್

ಶಾಲೆಯ ಮೊಟ್ಟೆ ವಿತರಣೆ ಕುರಿತಂತೆ ವಾಸ್ತವದಲ್ಲಿ ನನ್ನ ಅಭಿಪ್ರಾಯ ಪಡೆಯುವ ವೇಳೆ ನಮಗೆ ನೀಡಿದ ಮಾಹಿತಿಯೇ ತಪ್ಪು. ಶಾಲೆಯಲ್ಲಿ ಸಾಮೂಹಿಕವಾಗಿ ಎಲ್ಲರಿಗೂ ಮೊಟ್ಟೆ ವಿತರಿಸಲಾಗುತ್ತಿದೆ ಈ ಬಗ್ಗೆ ನನ್ನ ಅಭಿಪ್ರಾಯ ಕೇಳಲಾಗಿತ್ತು. ಆಹಾರದ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಸ್ಯಾಹಾರಿಗಳಿಗೆ ಮೊಟ್ಟೆ ತಿನ್ನಿಸುವ ಕೆಲಸ ಅಗಬಾರದು. ಶಾಲೆಯಲ್ಲಿ ಕೆಲವರಿಗೆ ಮೊಟ್ಟೆ ವಿತರಣೆ, ಕೆಲವರಿಗೆ ನೀಡದಿರುವುದು ಮತಬೇದಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ಅಂದು ವಿರೋಧ ವ್ಯಕ್ತಪಡಿಸಿದ್ದೆ. ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ. ಈ ವಿಚಾರ ನಮಗೆ ತಿಳಿಸದೆ ಮೊಟ್ಟೆ ಹಂಚುವ ಕುರಿತು ಅಭಿಪ್ರಾಯವೇನು ಎಂಬ ಅರ್ಧ ಸತ್ಯ ಕೇಳಲಾಗಿದೆ. ಸಮಾಜದ ಮುಂದೆ ನಮ್ಮ ಅಭಿಪ್ರಾಯ ಮುಂದಿಟ್ಟು ಶಾಲೆಯಲ್ಲಿ ಬಡ, ಆಶಕ್ತ, ದುರ್ಬಳ ಮಕ್ಕಳಿಗೆ ಮೊಟ್ಟೆ ಕೊಡುವುದನ್ನ ವಿರೋಧಿಸುತ್ತಿದ್ದಾರೆ.

ತಮ್ಮ ಅಭಿಪ್ರಾಯ ಏನು ಎಂಬ ಜನಸಮೂಹವನ್ನ ಎತ್ತಿಕಟ್ಟುವ ಕೆಲಸ ನೆಡೆದಿದೆ. ಸಮಾಜ ಸಂಘಟಿಸುವ ಕಾರ್ಯ ನಡೆಯಬೇಕು ಹೊರತು ಸಮಾಜ ಒಡೆಯುವ ಕೆಲಸ ನಡೆಯಬಾರದು. ಒಂದು ವರ್ಗವನ್ನು ಹೀಯಾಳಿಸುವ ಕೆಲಸ ಮಾಡಬಾರದೆಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *