ಲಾಸ್ಟ್ ಪ್ರೋಗ್ರಾಂನಲ್ಲಿ ಮಕ್ಕಳ ಜೊತೆ ಪೇಜಾವರ ಶ್ರೀಗಳು

– ಡ್ಯಾನ್ಸ್ ನೋಡಿ ಆನಂದಿಸಿದ್ದ ಸ್ವಾಮೀಜಿ

ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ದೇವರು, ಮಠ, ಎಷ್ಟು ಇಷ್ಟವೋ ಮಕ್ಕಳೆಂದರೂ ಅಷ್ಟೇ ಅಕ್ಕರೆ. ಸ್ವಾಮೀಜಿ ಮಣಿಪಾಲದ ಕೆಎಂಸಿ ಆಸ್ಪತ್ರೆ ಸೇರುವ ಕೆಲ ಗಂಟೆಗಳ ಹಿಂದೆ ತಮ್ಮದೇ ಮಠದ ಆನಂದ ತೀರ್ಥ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿ ಖುಷಿಪಟ್ಟಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳ ಡಾನ್ಸ್ ನೋಡಿ ಆನಂದಿಸಿದ್ದರು. ಪ್ರಶಸ್ತಿ ಕೊಡುವಾಗ ಪ್ರತಿಯೊಂದು ಮಗುವಿನ ಹೆಸರು ಮತ್ತು ಸಾಧನೆಯ ಬಗ್ಗೆ ಕೇಳುತ್ತಿದ್ದರು. ಸದಾ ನಗು ನಗುತ್ತಲೇ ಇರುವ, ಓಡಾಡುವ ಹಾಗೂ ಟೀಕೆಗಳಿಗೆ ನಕ್ಕು ಉತ್ತರ ಕೊಡುವ ಪೇಜಾವರ ಶ್ರೀಗಳು ಮಕ್ಕಳ ಜೊತೆ ಮಕ್ಕಳಾದ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಶಿಷ್ಯ ವೃಂದದಿಂದ ಮಂತ್ರಪಟನೆ

ವಿಶೇಷ ಅಂದರೆ ಪೇಜಾವರ ಶ್ರೀಗಳು ಕೊನೆಯದಾಗಿ ನೋಡಿದ್ದ ಮಕ್ಕಳ ಡಾನ್ಸ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಅರಮನೆ’ ಚಿತ್ರದ ‘ನಗು ನಗು’ ಹಾಡು ಎಂಬುದು ಮತ್ತೊಂದು ವಿಶೇಷವಾಗಿತ್ತು.

ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಭಾನುವಾರ ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *