ಕಚ್ಚಾ ಬಾದಾಮ್ ಹಾಡಿ ಟ್ರೋಲಾದ ರಾನು ಮಂಡಲ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಕಚ್ಚಾ ಬಾದಾಮ್ ಹಾಡನ್ನು ನೀವು ಕೇಳಿದ್ದಿರಾ?. ಆದರೆ ಇದೇ ಹಾಡನ್ನು ರಾನು ಮಂಡಲ್ ಹಾಡಿ ಟ್ರೋಲ್‍ಗೆ ಒಳಗಾಗಿದ್ದಾರೆ.

ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭೂಬನ್ ಬದ್ಯಾಕರ್ ಹಾಡಿದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿದೆ. ಕಚ್ಚಾ ಬಾದಾಮ್ ಹಾಡಿನ ಡಿಜೆ ಸೇರಿದಂತೆ ಹಲವು ವರ್ಶನ್‍ಗಳು ಬಂದಿವೆ.

ಈ ಹಿಂದೆ ಒಂದೇ ಒಂದು ಹಾಡಿನಿಂದ ಸೆನ್ಸೇಶನ್ ಆಗಿದ್ದ ರಾನು ಮಂಡಲ್ ಈ ವೈರಲ್ ಹಾಡನ್ನು ಹಾಡಿದ್ದಾರೆ. ರಾನು ಗಾಯನದ ಕಚ್ಚಾ ಬಾದಾಮ್ ಹಾಡು ಕೂಡಾ ಈಗ ವೈರಲ್ ಆಗುತ್ತಿದೆ. ಈ ವಿಡೀಯೋಗೆ ನೆಟ್ಟಿಗರು ಮಾತ್ರ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಓಂ ಶಾಂತಿ ಬಾದಾಮ್, ಆರ್‌ಐಪಿ ಬಾದಾಮ್ ಸಾಂಗ್ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

ಪಶ್ಚಿಮ ಬಂಗಾಳದ ಲಕ್ಷೀನಾರಾಯಣಪುರದ ನಿವಾಸಿ ಭುವನ್ ಬಡ್ಯಾಕರ್ ಪ್ರತೀ ದಿನ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‍ನಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತಾರೆ. ಕಡಲೆಕಾಯಿ ಮಾರಾಟದಿಂದ ಪ್ರತಿ ದಿನ 250 ರೂ. ಸಂಪಾದಿಸುವ ಭುವನ್ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಪೇರ್ ಚುರಾ ಹಾಥೇರ್ ಬಾಲಾ ಥಾಕೆ ಜೋಡಿ ಸಿಟಿ ಗೋಲ್ಡ್ ಎರ್ ಚೈನ್ ದಿಯೆ ಜಬೆನ್ ಟೇಟ್ ಶೋಮನ್ ಶೋಮನ್ ಬಾದಾಮ್ ಪಬೆನ್. ಅಂದರೆ ನಿಮ್ಮ ಬಳಿ ಬಳೆ ಅಥವಾ ಸರ ಇದ್ದರೆ ಅವುಗಳನ್ನು ನನಗೆ ನೀಡಬಹುದು. ನಾನು ಅದಕ್ಕೆ ಸಮಾನ ಭಾಗದ ಕಡಲೆಕಾಯಿಯನ್ನು ನಿಮಗೆ ನೀಡುತ್ತೇನೆ ಎಂಬುದು ಈ ಹಾಡಿನ ಅರ್ಥ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

ಭುವನ್ ಅವರು ಈ ಹಾಡನ್ನು ಹೇಳಿಕೊಂಡು ಕಡಲೆಕಾಯಿ ಮಾರಾಟ ಮಾಡುತ್ತಿದ್ದುದನ್ನು ನಿವಾಸಿಗರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವನ್ನು ಮೊದಲ ಬಾರಿಗೆ 2021ರ ನವೆಂಬರ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಕಡಲೆಕಾಯಿ ಮಾರುವವನ ಹಾಡನ್ನು ನೆಟ್ಟಿಗರು ಹಲವು ಮ್ಯೂಸಿಕ್‍ನೊಂದಿಗೆ ರಿಮಿಕ್ಸ್ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಡ್ಯಾನ್ಸ್‌ಗಳಿಗೆ ಬಳಸುತ್ತಿದ್ದಾರೆ. ಆದರೆ ರಾನು ಮಂಡಲ್ ಈ ಹಾಡಿನ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ರಾನು ಮಂಡಲ್ ಅವರು ಮೊದಲ ಬಾರಿಗೆ ಏಕ್ ಪ್ರಾರ್ ಕಾ ನಗ್ಮಾ ಹೈ ಹಾಡಿನ ವೀಡಿಯೋ ನಂತರ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದರು. 2019ರಲ್ಲಿ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ರಾಣಾಘಾಟ್ ನಿಲ್ದಾಣದಲ್ಲಿ  ಇಂಜಿನಿಯರ್ ಆಗಿರುವ ಅತಿಂದ್ರ ಚಕ್ರವರ್ತಿ ಅವರು ರಾನು ಮಂಡಲ್ ಅವರ ಹಾಡನ್ನು ರೆಕಾರ್ಡ್ ಮಾಡಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್ ಹಿಮೇಶ್ ರೇಶಮಿಯಾ ಅವರ ಸಿನಿಮಾಕ್ಕೆ ಹಾಡು ಹಾಡಿದ್ದರು.

Comments

Leave a Reply

Your email address will not be published. Required fields are marked *