ಮಕ್ಕಳ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಪವರ್ ಸ್ಟಾರ್ ಮಾಜಿ ಪತ್ನಿ!

ಹೈದರಾಬಾದ್: ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ತಮ್ಮ ಮಕ್ಕಳ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರೇಣು ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ತನ್ನ ಭಾವಿ ಪತಿಯ ಹೆಸರನ್ನು ಬಿಟ್ಟು ಕೊಟ್ಟಿಲ್ಲ. ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರೇಣು ಮಕ್ಕಳಾದ ಅಕಿರಾ ನಂದನ್(14) ಹಾಗೂ ಆಧ್ಯಾ(8) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

“ನನ್ನ ಮಕ್ಕಳಿಲ್ಲದೇ ನನ್ನ ಖುಷಿ ಅಪೂರ್ಣವಾಗುತ್ತದೆ. ಹಾಗಾಗಿ ನನ್ನ ಇಬ್ಬರು ಮಕ್ಕಳನ್ನು ನಾನು ನನ್ನ ಪಕ್ಕದಲ್ಲೇ ಇರಿಸಿಕೊಂಡಿದ್ದು ಖುಷಿ ಆಯ್ತು. ಈಗ ನಾನು ನನ್ನ ಜೀವನದ ಖುಷಿಯ ಅಧ್ಯಾಯವನ್ನು ಶುರು ಮಾಡುತ್ತಿದ್ದೇನೆ” ಎಂದು ರೇಣು ಟ್ವೀಟ್ ಮಾಡಿದ್ದಾರೆ. ರೇಣು ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ತಿಳಿದು ಪವನ್ ಕಲ್ಯಾಣ್ ಶುಭ ಕೋರಿದ್ದಾರೆ.

https://twitter.com/TravelwithSid/status/1010911753964646400

ಶುಭಾಶಯ ಕೋರಿದ ಎಲ್ಲ ಅಭಿಮಾನಿಗಳಿಗೆ ರೇಣು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಹಾಕುವ ಮೂಲಕ ಟ್ವಿಟ್ಟರಿನಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಆ ಫೋಟೋದಲ್ಲೂ ರೇಣು ತಮ್ಮ ಭಾವಿ ಪತಿ ಯಾರೆಂಬುದನ್ನು ಬಿಟ್ಟುಕೊಟ್ಟಿಲ್ಲ. ಟ್ವೀಟ್ ಮಾಡಿದ ಬಳಿಕ ಆ ಖಾತೆಯನ್ನು ಈಗ ರೇಣು ಅವರು ನಿಷ್ಕ್ರಿಯಗೊಳಿಸಿದ್ದಾರೆ. ರೇಣು 2010ರಲ್ಲಿ ನಟ ಪವನ್ ಕಲ್ಯಾಣ್‍ರನ್ನು ಮದುವೆಯಾಗಿದ್ದರು. ನಂತರ ರೇಣು 2014ರಂದು ತನ್ನ ಪತಿ ಪವನ್ ಕಲ್ಯಾಣ್ ಅವರಿಗೆ ವಿಚ್ಛೇದನ ನೀಡಿದ್ದರು.

ಸದ್ಯ ಪವನ್ ಹಾಗೂ ರೇಣು 2000ರಲ್ಲಿ ಬಿಡುಗಡೆಯಾದ ‘ಬದ್ರಿ’ ಚಿತ್ರ ಹಾಗೂ 2003ರಲ್ಲಿ ಬಿಡುಗಡೆಯಾದ ‘ಜಾನಿ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ರೇಣು ಪವನ್ ಕಲ್ಯಾಣ್ ನಟನೆಯ ‘ಗುಡುಂಬ ಶಂಕರ್’ ಹಾಗೂ ‘ಬಾಲು ಎಬಿಸಿಡಿಇಎಫ್‍ಜಿ’ ಚಿತ್ರದಲ್ಲಿ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

ಈ ಹಿಂದೆ ಪವನ್ 1997ರಲ್ಲಿ ನಂದಿನಿ ಅವರನ್ನು ಮದುವೆಯಾಗಿದ್ದರು. ನಂತರ 2007ರಲ್ಲಿ ಅವರಿಗೆ ವಿಚ್ಛೇದನ ನೀಡಿ ರೇಣು ಅವರನ್ನು ಮದುವೆಯಾಗಿದ್ದರು. ಬಳಿಕ ರೇಣು ಅವರಿಗೂ ವಿಚ್ಛೇದನ ನೀಡಿ ಸದ್ಯ ಈಗ ಅನ್ನಾ ಲೆಜ್ನೆವಾ ಜೊತೆ ಸಂಸಾರ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *