800 ರೂ. ಸಿನಿಮಾ ಟಿಕೆಟನ್ನ 1,29,999 ರೂ.ಗೆ ಖರೀದಿಸಿದ ʻಪವನ್‌ ಕಲ್ಯಾಣ್‌ʼ ಅಭಿಮಾನಿ

ತಮ್ಮಿಷ್ಟದ ನಟನಿಗಾಗಿ ಸರ್ವ ತ್ಯಾಗಕ್ಕೂ ಸಿದ್ಧವಿರುವ ಕೆಲ ಅಭಿಮಾನಿಗಳಿರ್ತಾರೆ. ಅಭಿಮಾನದ ಪರಾಕಾಷ್ಠೆಗೆ ಸಿಕ್ಕಿ ಹಣವನ್ನ ನೀರಿನಂತೆ ಖರ್ಚು ಮಾಡೋದಕ್ಕೂ ಅವರು ಯೋಚಿಸೋದಿಲ್ಲ. ಅಂಥದ್ದೇ ಹುಚ್ಚು ಅಭಿಮಾನಿಯೊಬ್ಬ (Pawan Kalyan fan) ಹೈದ್ರಾಬಾದ್‌ನಲ್ಲಿ ಗಮನ ಸೆಳೆದಿದ್ದಾನೆ. ಕೇವಲ ಒಂದೇ ಒಂದು ಸಿನಿಮಾ ಟಿಕೆಟ್‌ ಅನ್ನು 1,29,999 ರೂಪಾಯಿ ಕೊಟ್ಟು ಖರೀದಿಸಿದ್ದಾನೆ.

ಆಂಧ್ರ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ ಅಭಿಮಾನಿ ಈ ಹುಚ್ಚು ಸಾಹಸ ಮಾಡಿದ್ದಾನೆ. ಪವನ್ ಕಲ್ಯಾಣ್ OG ಸಿನಿಮಾ (OG Movie) ಟ್ರೈಲರ್‌ ರಿಲೀಸ್ ಕಾರ್ಯಕ್ರಮದಲ್ಲಿ ಬೆನಿಫಿಟ್ ಶೋ ಹೆಸರಿನಲ್ಲಿ ಟಿಕೆಟ್ ಹರಾಜು ಕೂಗಲಾಗಿತ್ತು. ಈ ವೇಳೆ ಚೌಟುಪ್ಪಲ್‌ನ ಅಮುದಲ ಪರಮೇಶ್ ಹೆಸರಿನ ಹುಚ್ಚು ಅಭಿಮಾನಿ, ಹರಾಜಿನಲ್ಲಿ 1,29,999 ರೂಪಾಯಿ ಬೆಲೆ ಕೂಗಿ ಚಿತ್ರದ ಮೊದಲ ಟಿಕೆಟ್ ಖರೀದಿಸಿದ್ದಾನೆ. ಇದನ್ನೂ ಓದಿ: ಧ್ರುವ ಸರ್ಜಾ ಜೀವನದ ಜಂಬೂ ಸವಾರಿ – ಸೆ.27ಕ್ಕೆ ಉದಯ ಟಿವಿಯಲ್ಲಿ ಪ್ರಸಾರ

ಅಂದಹಾಗೆ ಟಿಕೆಟ್ ಬೆಲೆ ಕೇವಲ 800 ರೂಪಾಯಿ ಆಗಿತ್ತಷ್ಟೆ. ಅದಕ್ಕವನು ಹರಾಜಿನಲ್ಲಿ 1,29,999 ದಾಖಲೆ ಬೆಲೆಗೆ ಕೊಂಡುಕೊಂಡಿರುವುದು ವಿಶೇಷ. ಇದನ್ನೂ ಓದಿ: ಅಂಬರೀಶ್‌ಗೆ ಕರ್ನಾಟಕ ರತ್ನ ನೀಡಿ- ಅಭಿಮಾನಿಗಳಿಂದ ಮನವಿ