ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!

ಅಮರಾವತಿ: ಟಾಲಿವುಡ್ ನಟ, ಜನ ಸೇನಾ ನೇತಾರ ಪವನ್ ಕಲ್ಯಾಣ್ ಕಾರು ಮೇಲಿಂದ ಬಿದ್ದ ಘಟನೆ ಆಂಧ್ರದಲ್ಲಿ ನಡೆದಿದೆ.

ಪವನ್ ಅವರು ರಾಜಮಹೇಂದ್ರವರಂನಿಂದ ನರಸಪುರಂಗೆ ರ್ಯಾಲಿ ಮೂಲಕ ಬರುತ್ತಿರುವಾಗ ಕಾರಿನ ಮೇಲೆ ಹತ್ತಿ ಅಭಿಮಾನಿಗಳಿಗೆ ಕೈ ಬೀಸುತ್ತಿದ್ದರು. ಈ ವೇಳೆ ಹಿಂದಿನಿಂದ ಅಭಿಮಾನಿಯೊಬ್ಬ ದಿಢೀರ್ ಎಂದು ಕಾರಿನ ಮೇಲೆ ಹತ್ತಿ ಬಂದಿದ್ದಾನೆ. ಇದರಿಂದ ಪವನ್ ಸಹ ಗಾಬರಿಗೊಂಡಿದ್ದಾರೆ.

https://twitter.com/filmycycle/status/1495371580200808455

ಅತ್ಯುತ್ಸಾಹದಿಂದ ನಟನನ್ನು ನೋಡಿ ತಬ್ಬಿಕೊಳ್ಳಲು ಅಭಿಮಾನಿ ಮುಂದಾಗಿದ್ದಾನೆ. ಆದರೆ ಗ್ರಿಪ್ ಸಿಗದೆ ಅಭಿಮಾನಿ ಜೊತೆ ಪವನ್ ಸಹ ಕೆಳಗೆ ಬಿದ್ದಿದ್ದಾರೆ. ಕಾರು ಮೇಲೆ ನಿಂತುಕೊಂಡಿದ್ದ ಕಾರಣ ಅಲ್ಲಿ ಹಿಡಿದುಕೊಳ್ಳಲು ಏನೂ ಸಿಗದ ಕಾರಣ ಈ ಘಟನೆ ಸಂಭವಿಸಿದೆ. ಆದರೆ ಅವರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಇದನ್ನೂ ಓದಿ:  ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

ಸುದ್ದಿ ತಿಳಿದ ಅಭಿಮಾನಿಗಳು ಪೊಲೀಸ್ ಭದ್ರತೆ ಬಗ್ಗೆ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *