ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಪೌಲ್ ಆಲೆನ್ ವಿಧಿವಶ

ವಾಷಿಂಗ್ಟನ್: ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ (ಓಎಸ್)ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದ ಮೈಕ್ರೋಸಾಫ್ಟ್‌ನ  ಕಾರ್ಪೊರೇಷನ್ ಸಹ ಸಂಸ್ಥಾಪಕ ಪೌಲ್ ಆಲೆನ್ ವಿಧಿವಶರಾಗಿದ್ದಾರೆ.

ಪೌಲ್ ಆಲೆನ್ (65) ಅವರು ಸೋಮವಾರ ನಿಧನರಾಗಿದ್ದಾರೆ. ಪೌಲ್ ಅವರು ರಕ್ತ ಕ್ಯಾನ್ಸರ್ (ನಾನ್ ಹಾಡ್ಗ್‍ಕಿನ್ಸ್ ಲಿಂಪೋಮಾ) ನಿಂದ ಬಳಲುತ್ತಿದ್ದರು. ಕಳೆದ ಎರಡು ವಾರಗಳಿಂದ ಕಾಯಿಲೆ ತೀವ್ರಗೊಂಡ ಪರಿಣಾಮ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ.

ಪ್ರೀತಿಯ ಗೆಳೆಯನ ಅಗಲಿಕೆ ನನ್ನ ಮನಸ್ಸು ಛಿದ್ರಗೊಳಿಸಿದೆ. ಮೈಕ್ರೋಸಾಫ್ಟ್ ಕಾರ್ಪೊರೇಷನ್ ಸಂಸ್ಥೆಯ ಪಾಲುದಾರ ಪೌಲ್ ಆತನಿಲ್ಲದಿದ್ದರೆ ಪರ್ಸನಲ್ ಕಂಪ್ಯೂಟರ್ (ಪಿಸಿ) ಬಹುಶಃ ಸಾಧ್ಯವೇ ಆಗುತ್ತಿರಲಿಲ್ಲ ಎಂದು ಬಿಲ್ ಗೇಟ್ಸ್ ನೋವು ದುಃಖ ಹಂಚಿಕೊಂಡಿದ್ದಾರೆ.

ಶಾಲಾ ದಿನಗಳಿಂದಲೇ ಬಿಲ್ ಗೇಟ್ಸ್ ಹಾಗೂ ಪೌಲ್ ಅವರು ಪರಿಚಿತರು. ಅವರ ಸ್ನೇಹ ಮೈಕ್ರೋಸಾಫ್ಟ್ ಸಂಸ್ಥೆಯ ಬೆಳವಣಿಗೆಯಲ್ಲಿ ಮುಂದುವರಿಯಿತು. ಈ ಜೋಡಿ ಅನೇಕರಿಗೆ ಕಡಿಮೆ ದರದಲ್ಲಿ ಸಾಫ್ಟವೇರ್ ದೊರಕಿಸಿಕೊಡುವ ಕಾರ್ಯ ಮಾಡಿದೆ. ಅಷ್ಟೇ ಅಲ್ಲದೆ ವಿಂಡೋಸ್ ಓಎಸ್ ಅನ್ನು ಕಾಲಕಾಲಕ್ಕೆ, ತಂತ್ರಜ್ಞಾನಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಿ, ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆದಾರರು ಹೊಂದಿದ್ದಾರೆ.

ಪೌಲ್ ಅವರಿಗೆ 1983ರಲ್ಲಿಯೇ ಕಾನ್ಸರ್ ಲಕ್ಷಣಗಳು ಕಾಣಿಸಿಕೊಂಡವು. ಇದರಿಂದಾಗಿ ಸಂಸ್ಥೆಯ ಸ್ಥಾನದಿಂದ ಹೊರಗುಳಿದರು. ಪೌಲ್ ನಮ್ಮ ಆದಾಯದಲ್ಲಿ 730 ಕೋಟಿ ರೂ. ಅನ್ನು ಮೆದುಳು ಸಂಬಂಧಿ ಸಂಶೋಧನೆಗೆ, 184 ಕೋಟಿ ರೂ. ವನ್ನು ಅನ್ಯಗ್ರಹದಲ್ಲಿ ಜೀವ ಸಂಕುಲ ಶೋಧ ಕಾರ್ಯಕ್ಕಾಗಿ ದೇಣಿಗೆ ನೀಡಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಪೊರೇಷನ್ ಸಿಇಒ ಸತ್ಯ ನದೆಲ್ಲಾ ಅವರು ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಪೌಲ್ ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *