ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

ಪಾಟ್ನಾ: ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಪೊಲೀಸರಿಗೆ ಡಿಕ್ಕಿಯೊಡೆದ ಪರಿಣಾಮ ಓರ್ವ ಮಹಿಳಾ ಕಾನ್ಸ್‌ಟೆಬಲ್‌ (Woman Constable) ಸಾವನ್ನಪ್ಪಿದ್ದು, ಇಬ್ಬರು ಅಧಿಕಾರಿಗಳು ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್ ಪಥ್‌ನಲ್ಲಿ (Atal Path) ನಡೆದಿದೆ.

ಬುಧವಾರ ತಡರಾತ್ರಿ ಪಾಟ್ನಾದ (Patna) ಶ್ರೀಕೃಷ್ಣ ಪುರಿ ಪ್ರದೇಶದ ಅಟಲ್ ಪಥ್‌ನಲ್ಲಿ ಗಸ್ತಿನಲ್ಲಿದ್ದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿತ್ತು. ಶ್ರೀಕೃಷ್ಣ ಪುರಿ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್, ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಸ್ಥಳದಲ್ಲಿದ್ದರು. ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಮತ್ತೊಂದು ಕಾರು (Scorpio SUV) ತಪಾಸಣೆ ನಡೆಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಡಿದೆ. ಪರಿಣಾಮ ಕಾನ್ಸ್‌ಟೆಬಲ್‌ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ:  `ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ

ಗಾಯಗೊಂಡ ಪೊಲೀಸರನ್ನ ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸಾ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವ್ಕಾಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ 11 ವರ್ಷದಲ್ಲಿ ಸಾಧನೆಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ – ದೇಶದ ಭದ್ರತೆ, ರೈತರ ವಿಚಾರದಲ್ಲಿ ಕೇಂದ್ರ ಫೇಲ್: ಪ್ರದೀಪ್‌ ಈಶ್ವರ್‌

ಅಪಘಾತದ ಬಳಿಕ ಸ್ಕಾರ್ಪಿಯೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದ್ರೆ ವಾಹನವನ್ನ ವಶಪಡಿಸಿಕೊಂಡಿದ್ದು, ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ