ಪಾಟ್ನಾ: ಮದುವೆಗೆ ಆಗಮಿಸಿದ ಪೊಲೀಸರನ್ನು ಕಂಡ ಕೂಡಲೇ ವರನೊಬ್ಬ ಪರಾರಿಯಾಗಿರುವ ಘಟನೆ ಬಿಹಾರ ರಾಜ್ಯದ ಪ್ರವಾಹ ಉಪವಿಭಾಗದ ಅನುಮಂಡಲ ಎಂಬಲ್ಲಿ ನಡೆದಿದೆ.
ಸೋಮವಾರ ಗ್ರಾಮದ ಉಮಾನಾಥ ದೇವಸ್ಥಾನದಲ್ಲಿ ಚಿನ್ನೈ ಗ್ರಾಮದ ಯುವಕ ಮತ್ತು ಮೊಕಾಮ್ ಗ್ರಾಮದ ಯುವತಿಯ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಮಂಟಪದಲ್ಲಿ ಅರಿಶಿಣ ಶಾಸ್ತ್ರ ನಡೆಯುವಾಗ ದೇವಸ್ಥಾನಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಕೂತಿದ್ದ ಸ್ಥಳದಿಂದ ಎದ್ದು ನಿಂತ ವರ ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!
ಮದುವೆ ಬಿಟ್ಟು ವರ ಪರಾರಿಯಾಗಿದ್ದನ್ನು ಕಂಡ ವಧುವಿನ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಧುವಿನ ಪೋಷಕರು ದೂರು ದಾಖಲಿಸುತ್ತಿದ್ದಂತೆ ಠಾಣೆಗೆ ಬಂದ ವರನೂ ಸಹ ದೂರು ದಾಖಲಿಸಿದ್ದಾನೆ.
ಮದುವೆ ಮಂಟಪದಲ್ಲಿ ನನ್ನ ಬಳಗದವರು ಯಾರು ಇರಲಿಲ್ಲ. ಬಲವಂತವಾಗಿ ನನಗೆ ಈ ಮದುವೆ ಮಾಡಲಾಗುತ್ತಿತ್ತು. ಹಾಗಾಗಿ ನಾನು ಮದುವೆ ಮಂಟಪದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..!
ಪೊಲೀಸರು ವರ ಮತ್ತು ವಧುವಿನ ಕಡೆಯವರ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಮದುವೆ ಬಗ್ಗೆ ಗ್ರಾಮದ ತುಂಬೆಲ್ಲಾ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಎಂಜಿನಿಯರ್ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡ ಲೇಡಿ ಡಾಕ್ಟರ್ ಬಸ್ ಕಂಡಕ್ಟರನ್ನ ಮದುವೆಯಾದ್ಳು!
ಇದನ್ನೂ ಓದಿ: ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!





Leave a Reply