ಇಲಿ ಕಚ್ಚಿದ್ದಕ್ಕೆ ವ್ಯಕ್ತಿಗೆ ಐಸಿಯುವಿನಲ್ಲಿ ಚಿಕಿತ್ಸೆ

Rat

ಹೈದರಾಬಾದ್: ತೆಲಂಗಾಣದ ವಾರಂಗಲ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಯೊಂದು ರೋಗಿಯೊಬ್ಬರಿಗೆ ಕಚ್ಚಿದ್ದರಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೀಗ ನಾಲ್ಕು ದಿನಗಳ ಹಿಂದೆ ವಾರಂಗಲ್‍ನ ಎಂಜಿಎಂ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಯು ಇಲಿ ಕಚ್ಚಿದಾಗಿಲಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಉಸಿರಾಡಲು ವೆಂಟಿಲೇಟರ್ ಅಳವಡಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ರಾಜ್ಯ ಸರ್ಕಾರವು ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಐಸಿಯು ವಿಭಾಗದ ಮುಖ್ಯಸ್ಥರನ್ನು ಅಮಾನತುಗೊಳಿಸಿದೆ ಮತ್ತು ಆಸ್ಪತ್ರೆಯ ಅಧೀಕ್ಷಕರನ್ನು ವರ್ಗಾವಣೆ ಮಾಡಿದೆ. ಡ್ರೈನೇಜ್ ವ್ಯವಸ್ಥೆ ದುರಸ್ತಿಯಲ್ಲಿರುವುದರಿಂದ ಐಸಿಯುವಿನಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ವಾರ್ಡ್‍ಗಳಲ್ಲಿ ಇಲಿಗಳು ಕಚ್ಚುವುದು ಸರ್ವೇಸಾಮಾನ್ಯವಾಗಿದೆ ಎಂದು ರೋಗಿಗಳು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

POLICE JEEP

ಇದು ನಮ್ಮ ಹಣೆಬರಹ ಎಂದು ನಾವು ಭಾವಿಸಿದ್ದೇವೆ. ಇದನ್ನು ಅನುಭವಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇಲ್ಲ. ಆದರೆ ಈ ಬಾರಿ ನನ್ನ ಸಂಬಂಧಿಗೆ ಇಲಿಗಳು ಕಚ್ಚಿದಾಗ, ಅವರಿಗೆ ತುಂಬಾ ರಕ್ತಸ್ರಾವವಾಗಿದೆ. ಹಾಸಿಗೆಯು ರಕ್ತದಿಂದ ತುಂಬಿತ್ತು, ಆದ್ದರಿಂದ ನಾನು ದೂರು ನೀಡಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಕರ್ತವ್ಯದಲ್ಲಿದ್ದ ನರ್ಸ್, ಡ್ರೈನೇಜ್ ದುರಸ್ತಿಯಲ್ಲಿರುವುದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ನೈರ್ಮಲ್ಯ ಏಜೆನ್ಸಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

Comments

Leave a Reply

Your email address will not be published. Required fields are marked *