ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಇಂಜೆಕ್ಷನ್ ನೀಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಣಕಲ್ ಮತ್ತಿಕಟ್ಟೆಯಲ್ಲಿ ನಡೆದಿದೆ.
ಬಾಳೂರು ಹೊರಟ್ಟಿ ಗ್ರಾಮದ ನಿವಾಸಿ ವಿಜಯ್ ಸಾವನ್ನಪ್ಪಿರುವ ದುರ್ದೈವಿ. ಭಾನುವಾರ ರಾತ್ರಿ ವಾಂತಿ ಭೇದಿ ಆರೋಗ್ಯ ಸಮಸ್ಯೆಯಿಂದ ಬಣಕಲ್ ಮತ್ತಿಕಟ್ಟೆಯ ರಸ್ತೆಯಲ್ಲಿರುವ ಕಾಂಪೌಂಡರ್ ಚನ್ನಪ್ಪ ಅವರ ಖಾಸಗಿ ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ಬಂದಿದ್ದಾರೆ.

ಚಿಕಿತ್ಸೆ ಪಡೆದುಕೊಂಡ ಸ್ವಲ್ಪ ಹೊತ್ತಿಗೆ ವಿಜಯ್ ಮೃತಪಟ್ಟಿದ್ದಾರೆ. ಆದರೆ ಡಾಕ್ಟರ್ 3 ಇಂಜೆಕ್ಷನ್ ಕೊಟ್ಟಿರುವುದರಿಂದಲೇ ವಿಜಯ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.
ವಿಜಯ್ ಶವವನ್ನು ಅಸ್ಪತ್ರೆಯ ಮುಂಭಾಗದಲ್ಲಿಟ್ಟು ಸಂಬಂಧಿಕರು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.



Leave a Reply