ಬೆಂಗಳೂರಿನಲ್ಲಿಯೇ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿಯೇ (Bengaluru) ಚೊಚ್ಚನ ಮಗುವಿಗೆ ದೀಪಿಕಾ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:ರಿಷಬ್ ಶೆಟ್ಟಿ, ಅಶ್ವಿನಿ, ಶಿವಣ್ಣ ಬಳಿಕ ಆರ್‌ಸಿಬಿ ಅನ್‌ಬಾಕ್ಸ್ ಪ್ರೋಮೋದಲ್ಲಿ ಸುದೀಪ್

ಕನ್ನಡತಿ ದೀಪಿಕಾ ಪಡುಕೋಣೆ- ರಣ್‌ವೀರ್ (Ranveer Singh) ಜೋಡಿ ಹಲವು ವರ್ಷಗಳು ಪ್ರೀತಿಸಿ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ 6 ವರ್ಷಗಳ ನಂತರ ಈ ಜೋಡಿ ಪೋಷಕರಾಗುತ್ತಿದ್ದಾರೆ. ಇನ್ನೂ ದೀಪಿಕಾ ಮೂಲತಃ ಮಂಗಳೂರಿನವರಾಗಿದ್ದು, ನಟಿಯ ಪೋಷಕರು ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮಗುವಿಗೆ ಬೆಂಗಳೂರಿನಲ್ಲಿಯೇ ಜನ್ಮ ನೀಡಲು ದೀಪಿಕಾ ನಿಶ್ಚಯಿಸಿದ್ದಾರೆ. ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಮನೆಯಿದ್ದು, ಇಲ್ಲಿಯೇ ಅವರು ಹಲವು ತಿಂಗಳುಗಳ ಕಾಲ ಸಮಯ ಕಳೆಯಲಿದ್ದಾರೆ. ನಗರದ ಪ್ರತಿಷ್ಠಿತ ಆಸ್ಪತ್ರೆಗೆ ನೆರವನ್ನು ಪಡೆದುಕೊಳ್ಳಲಿದ್ದಾರೆ. ಯಾವ ಆಸ್ಪತ್ರೆ, ಯಾವ ವೈದ್ಯರು ದೀಪಿಕಾ ಪಡುಕೋಣೆ ಹೆರಿಗೆ ಮಾಡಿಸಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

ಬೆಂಗಳೂರಿನ ತಮ್ಮ ಇಷ್ಟದ ಜಾಗಗಳಲ್ಲಿ ಓಡಾಡಲಿದ್ದಾರೆ. ಬೆಂಗಳೂರಿನ ದೀಪಿಕಾ ಇಷ್ಟದ ಹೋಟೆಲ್‌ಗಳಾದ ಗೀತಾ ಸ್ಟೋರ್ಸ್, ಮೇಘನಾ, ವಿದ್ಯಾರ್ಥಿ ಭವನ್, ಸಿಟಿಆರ್ ಇನ್ನಿತರೆ ಹೋಟೆಲ್‌ಗಳಿಗೆ ಭೇಟಿ ನೀಡಲಿದ್ದಾರೆ.