ಕೋಲಾರ| ಪ್ಯಾಸೆಂಜರ್ ರೈಲು ತಡೆದು ಪ್ರಯಾಣಿಕರ ಪ್ರತಿಭಟನೆ

ಕೋಲಾರ: ಕೆಜಿಎಫ್‌ನಿಂದ ಬೆಂಗಳೂರಿಗೆ ತೆರಳುವ ರೈಲುಗಳಿಗೆ ಕೋಚ್ ಕಡಿಮೆ ಮಾಡಿದ ಹಿನ್ನೆಲೆ ಪ್ಯಾಸೆಂಜರ್ ರೈಲು (Passenger Train) ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ಕೋಲಾರದ (Kolar) ಬಂಗಾರಪೇಟೆ (Bangarpet) ರೈಲು ನಿಲ್ದಾಣದಲ್ಲಿ ನಡೆದಿದೆ.

ನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ಎಂದು ಸಾವಿರಾರು ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಇದೀಗ ರೈಲು ಪ್ರಯಾಣಕ್ಕೆ ತೊಂದರೆಯಾಗುವಂತೆ ರೈಲ್ವೆ ಇಲಾಖೆ ಕೋಚ್‌ಗಳನ್ನು ಕಡಿಮೆ ಮಾಡಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆ ಕ್ರಮವನ್ನು ಖಂಡಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್‌

ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಮಾರಿಕುಪ್ಪಂನಿಂದ ಬೆಂಗಳೂರಿನ ಸಂಗೋಳ್ಳಿರಾಯಣ್ಣ ನಿಲ್ದಾಣಕ್ಕೆ ತಲುಪುವ ಪ್ಯಾಸೆಂಜರ್ ರೈಲನ್ನು 45 ನಿಮಿಷಗಳ ಕಾಲ ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೋಚ್ ಹೆಚ್ವಿಸುವ ಭರವಸೆ ಕೊಟ್ಟಿದ್ದಾರೆ. ನಂತರ ರೈಲು ಮುಂದಕ್ಕೆ ಚಲಿಸಿದೆ. ಇದನ್ನೂ ಓದಿ: GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್‌? ಲಾಭ ಏನು?